Home ರಾಜಕೀಯ ಸಮಾಚಾರ ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ದ.ಕ ಮತ್ತು ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಅಬ್ದುಲ್ ರಹಿಮಾನ್ ಪಡ್ಪು ನೇಮಕ

ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ದ.ಕ ಮತ್ತು ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಅಬ್ದುಲ್ ರಹಿಮಾನ್ ಪಡ್ಪು ನೇಮಕ

4
0

ಬೆಳ್ತಂಗಡಿ;  ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಅಬ್ದುಲ್ ರಹಿಮಾನ್ ಪಡ್ಪು ರವರನ್ನು ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಮಾನ್ಯ ಡಿ.ಕೆ.ಶಿವಕುಮಾರ್ ಮತ್ತು ಕೆ.ಪಿ ಸಿ.ಸಿ.ಕಾರ್ಯಾಧ್ಯಕ್ಷರಾದ ಜೆ.ಇ.ಚಂದ್ರಶೇಖರ್ ರವರ ಆದೇಶದಂತೆ,ರಾಜ್ಯ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಕಾರ್ಮಿಕ ಘಟಕದ ದ.ಕ ಮತ್ತು ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಕೆ ಪುಟ್ಟಸ್ವಾಮಿಗೌಡ ನೇಮಕಗೊಳಿಸಿರುತ್ತಾರೆ.

ಮುಂದಿನ ದಿನಗಳಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಮಿಕ ಘಟಕದ ಬ್ಲಾಕ್ ಪದಾಧಿಕಾರಿಗಳನ್ನು, ಬೂತ್ ಮಟ್ಟದ ಸಮಿತಿಯನ್ನು ,ಘಟಕದ ಎಲ್ಲಾ ವಿಭಾಗದ ಸಮಿತಿಯನ್ನು ರಚಿಸಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಮತ್ತು ರಾಜ್ಯ ಸಮಾವೇಶ ನಡೆಸಲು ಅನುವಾಗುವಂತೆ ಕಾರ್ಯನಿರ್ವಹಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಹಾಗೂ ಪಕ್ಷದ ದ.ಕ. ಮತ್ತು ಉಡಪಿ ಜಿಲ್ಲೆಯ ಅಧ್ಯಕ್ಷರು,ಮಾಜಿ ಶಾಸಕರು,ಪರಾಜಿತ ಅಭ್ಯರ್ಥಿಗಳು,ಜಿಲ್ಲಾ ಮಟ್ಟ ಮತ್ತು ಬ್ಲಾಕ್ ಮಟ್ಟದ ಮುಂಚೂಣಿ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಹಾಗೂ ಕಾರ್ಮಿಕ ಘಟಕದ ಬೆಳವಣಿಗೆಗೆ ಶ್ರಮಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಅಬ್ದುಲ್ ರಹಿಮಾನ್ ಪಡ್ಪು ರವರು ಈ ಹಿಂದಿನಿಂದಲೂ ಜಿಲ್ಲಾ ಮತ್ತು ರಾಜ್ಯಮಟ್ಟದ ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.ಮತ್ತು ಮಡಂತ್ಯಾರು ಸೌಹಾರ್ಧ ಫ್ರೆಂಡ್ಸ್ ಇದರ ಸ್ಥಾಪಕ ಅಧ್ಯಕ್ಷರಾಗಿ,ಮಡಂತ್ಯಾರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿ,ಮಡಂತ್ಯಾರು ಸಿ.ಎ. ಬ್ಯಾಂಕಿನ ಮಾಜಿ ನಿರ್ದೇಶಕರಾಗಿ ಪ್ರಸ್ತುತ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಉಪಾದ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .

LEAVE A REPLY

Please enter your comment!
Please enter your name here