Home ಸ್ಥಳೀಯ ಸಮಾಚಾರ ಮುಂಡಾಜೆ ಮತ್ತು ಕಕ್ಕಿಂಜೆ ರೋಟರಿ ಸಮುದಾಯ ದಳಗಳ ಪದಾಧಿಕಾರಿಗಳ ಆಯ್ಕೆ

ಮುಂಡಾಜೆ ಮತ್ತು ಕಕ್ಕಿಂಜೆ ರೋಟರಿ ಸಮುದಾಯ ದಳಗಳ ಪದಾಧಿಕಾರಿಗಳ ಆಯ್ಕೆ

6
0


ಬೆಳ್ತಂಗಡಿ;  ರೋಟರೀ ಕ್ಲಬ್ ಬೆಳ್ತಂಗಡಿಯ ಅಂಗ ಸಂಸ್ಥೆಯಾದ ರೋಟರಿ ಸಮುದಾಯ ದಳ (RCC) ಇದರ ಮುಂಡಾಜೆ ಘಟಕ ಮತ್ತು ಕಕ್ಕಿಂಜೆ ಘಟಕದ ಪದಾಧಿಕಾರಿಗಳ ಆಯ್ಕೆ ಉಜಿರೆಯ ಓಶನ್ ಪರ್ಲ ನಲ್ಲಿ  ನಡೆಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ಪ್ರೊ. ಪ್ರಕಾಶ ಪ್ರಭು ಕರೆದ ಈ ಸಭೆಯಲ್ಲಿ, ಮುಂಡಾಜೆ ಆರ್ ಸಿ ಸಿಯ ಅಧ್ಯಕ್ಷರಾಗಿ  ಪಿ ಸಿ ಸೆಬಾಸ್ಟಿಯನ್ , ಕಾರ್ಯದರ್ಶಿಯಾಗಿ  ರಾಕೇಶ್, ಕೋಶಾಧಿಕಾರಿಯಾಗಿ  ರಂಗನಾಥ ಹೆಬ್ಬಾರ ಆಯ್ಕೆ ಆದರು.
ಅದೇ ರೀತಿ ಕಕ್ಕಿಂಜೆ ಆರ್ ಸಿ ಸಿಯ ಅಧ್ಯಕ್ಷರಾಗಿ ಶ್ರೀಮತಿ ಶಾರದ ಎ, ಕಾರ್ಯದರ್ಶಿಯಾಗಿ ಶ್ರೀ ಗೋಪಾಲಕೃಷ್ಣ ಗೌಡ, ಕೋಶಾಧಿಕಾರಿಯಾಗಿ ಶ್ರೀ ಪ್ರಾನ್ಸಿಸ್ ವಿ ಪಿ ಆಯ್ಕೆ ಆದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಬಿ ಓ ಡಿ ಸದಸ್ಯ ರೋ. ಪ್ರವೀಣ ಗೋರೆ, ಆ್ಯನ್ಸ ಕ್ಲಬ್ಬಿನ ಮಾಜಿ ಅಧ್ಯಕ್ಷೆ ಆ್ಯನ್ ಡಾ. ಅನಿತಾ ದಯಾಕರ್, ಆ್ಯನ್ ಗೀತಾ ಪ್ರಭು, ಮುಂಡಾಜೆಯ ಶ್ರೀ ವಿಘ್ನೇಶ ಪ್ರಭು, ಶ್ರೀ ಗುರುರಾಜ್ ಎಸ್, ಕಕ್ಕಿಂಜೆಯ ಶ್ರೀ ಶ್ರೀನಿವಾಸ್ ಕುಲಾಲ್, ಶ್ರೀ ಪ್ರಸಾದ್ ಕೆ ವೈ, ಶ್ರೀ ಓಬಯ್ಯ ಗೌಡ, ಶ್ರೀಮತಿ ಸವಿತಾ ಕುಲಾಲ್, ಶ್ರೀಮತಿ ಮೋಹಿನಿ ಭಾಗವಹಿಸಿದರು.

LEAVE A REPLY

Please enter your comment!
Please enter your name here