Home ಸ್ಥಳೀಯ ಸಮಾಚಾರ ಅಕ್ರಮ ಕಸಾಯಿ ಖಾನೆಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಿ ವಿಶ್ವ ಹಿಂದೂ ಪರಿಷತ್ ಒತ್ತಯ

ಅಕ್ರಮ ಕಸಾಯಿ ಖಾನೆಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಿ ವಿಶ್ವ ಹಿಂದೂ ಪರಿಷತ್ ಒತ್ತಯ

16
0

ಬೆಳ್ತಂಗಡಿ:ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲು ಹತ್ತಿರ  ಅಕ್ರಮ ಕಸಾಯಿಖಾನೆಯಲ್ಲಿ ದನಗಳನ್ನು ಹಿಂಸಾತ್ಮಕವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಅಮಾನುಷ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ಉಗ್ರವಾಗಿ ಖಂಡಿಸುತ್ತದೆ. ಎಂದು ಪ್ರಾಂತ ಗೋ ರಕ್ಷಾ ಪ್ರಮುಖ್ ಸುನೀಲ್ ಕೆ.ಆರ್. ಹೇಳಿದರು. ಅವರು ಸೆ 09 ರಂದು ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಗುರುವಾಯನಕೆರೆಯಲ್ಲಿ ಅವ್ಯಾಹತವಾಗಿ ಅಕ್ರಮ ಗೋ ವಧೆ ಮಾಡುತಿದ್ದರೂ ಪೊಲೀಸ್ ಇಲಾಖೆ ತಡೆಗಟ್ಟಲು ವಿಫಲವಾಗಿದೆ. ಈ ಬಗ್ಗೆ ಈಗಾಗಲೇ ವಿಶ್ವ ಹಿಂದೂ ಪರಿಷತ್ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಗೋ ಮಾಂಸ ತಯಾರಿ ನಡೆಸುತ್ತಿರುವ ಮನೆಗೆ ಪೊಲೀಸ್ ದಾಳಿ ನಡೆಸಿದಾಗ ಒಂಬತ್ತು ರುಂಡ ಹಾಗೂ ಒಂದು ಜೀವಂತ ದನ ಹಾಗೂ ಕರು ಸಿಕ್ಕಿದೆ. ಸಮಾಜದ ಮೂಲ ನಂಬಿಕೆಗಳಲ್ಲಿ ಒಂದಾದ ಗೋವನ್ನು ಹಿಂದೂ ಸಮಾಜದ ನಂಬಿಕೆಗಳಿಗೆ ಅಪಚಾರ ಮಾಡಬೇಕು ಹಾಗೂ ಸಮಾಜದ ಅಶಾಂತಿ ಸೃಷ್ಟಿಸಬೇಕೆಂಬ ಉದ್ಧೇಶದಿಂದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ರೀತಿ ಕಾನೂನಿನ ಭಯ ಇಲ್ಲದೇ ರಾಜರೋಷವಾಗಿ ಅಕ್ರಮ ಕಸಾಯಿಖಾನೆಗಳಲ್ಲಿ ಹತ್ಯೆ ಮಾಡುವ ಕಾರ್ಯಗಳು ನಡೆಯುತಿದ್ದು ಪೊಲೀಸ್ ಇಲಾಖೆ ಇದರ ಬಗ್ಗೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು  ಮತ್ತು ಇದರಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿಸುತ್ತದೆ ಎಂದು ಒತ್ತಾಯಿಸಿದರು. ಒಂದು ವೇಳೆ ಕ್ರ
ಮ ಕೈಗೊಳ್ಳದೇ ಹೋದರೆ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ
ಗುರುವಾಯನಕೆರೆ ಚಲೋ ಹೋರಾಟ ಕೈಗೊಳ್ಳಲಾಗುವುದು ಎಂದರು. ಚಿಕ್ಕ ಮಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ಕಾರು ಸಹಿತ ವಿವಿಧ ವಾಹನಗಳಲ್ಲಿ ಗೋ ಸಾಗಣೆ ನಡೆಯುತ್ತಿದ್ದು, ಪೊಲೀಸರಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾಹಿತಿ ಎಲ್ಲೆಡೆ ಹರಡುತಿದ್ದು, ಒಂದು ವೇಳೆ ಈ ರೀತಿ ನಡೆಯುವುದು ಗೊತ್ತಾದರೆ ಹಿಂದೂ ಕಾರ್ಯಕರ್ತರು ರಸ್ತೆಗಿಳಿಯಬೇಕಾದೀತು ಇದಕ್ಕೆ ಪೊಲೀಸ್ ಇಲಾಖೆ ನೇರ ಹೊಣೆಯಾಗಲಿದೆ.ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ
ಬಜರಂಗದಳದ ಪ್ರಾಂತ ಸಹ ಸಂಯೋಜಕ ಪುನೀತ್ ಅತ್ತಾವರ,
ವಿಶ್ವ ಹಿಂದೂ ಪರಿಷತ್ತು ಬೆಳ್ತಂಗಡಿ ಅಧ್ಯಕ್ಷ ವಿಷ್ಣು ಮರಾಠೆ, ಪುತ್ತೂರು ಜಿಲ್ಲಾ ಬಜರಂಗದಳ ಸಹ ಸಂಯೋಜಕ ದಿನೇಶ್ ಚಾರ್ಮಾಡಿ,ಬಜರಂಗದಳ ಬೆಳ್ತಂಗಡಿ ಪ್ರಖಂಡ ಸಂಯೋಜಕ ಪ್ರಭಾಕರ ಮಚ್ಚಿನ, ಬೆಳ್ರಂಗಡಿ ಪ್ರಖಂಡ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ರಮೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here