Home ಅಪರಾಧ ಲೋಕ ಬೆಳ್ತಂಗಡಿ ; ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ ; ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

0

ಬೆಳ್ತಂಗಡಿ; ಓಡಿಲ್ನಾಳ ಗ್ರಾಮದ‌ ಭದ್ರಕಜೆ ಎಂಬಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ 8ರಂದು ಸಂಭವಿಸಿದೆ.
ಮೃತ ವ್ಯಕ್ತಿ ಸ್ಥಳೀಯ ನಿವಾಸಿ ಸೂರಜ್ (39) ಎಂಬಾತನಾಗಿದ್ದಾನೆ.
ಈತ ಓಡಿಲ್ನಾಳದ ಯುವತಿಯನ್ನು ಮದುವೆಯಾಗಿದ್ದು ಕಳೆದ ಆರು ತಿಂಗಳಿನಿಂದ‌ ಓಡಿಲ್ನಾಳ ಗ್ರಾಮದ‌ ಭದ್ರಕಜೆಯಲ್ಲಿರುವ ಪತ್ನಿ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಈತ ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದ್ದು ಕುಡಿತದ ಅಮಲಿನಲ್ಲಿ ಈತ ಸೆ 8 ರಂದು ಪತ್ನಿ ಮನೆಯಲ್ಲಿರದ ವೇಳೆ ಪತ್ನಿಯ ತಾಯಿಯ ಮೇಲೆ .ಮರದ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಹಲ್ಲೆಗೆ ಒಳಗಾದ ಮಹಿಳೆ ಆಸ್ಪತ್ರೆಗೆ ಹೋಗಿದ್ದು ಹಲ್ಲೆ ನಡೆಸಿದ ಬಳಿಕ ಈತ ಮನೆಯಲ್ಲಿ ಇದ್ದ ಎನ್ನಲಾಗಿದ್ದು ಸಂಜೆಯ ವೇಳೆ ಈತ ಮನೆಯೊಳಗೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version