


ಬೆಳ್ತಂಗಡಿ; ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಗಿರೀಶ್ ಮಟ್ಟಣ್ಣನವರ್ ಅವರು ವಿಚಾರಣೆಗಾಗಿ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.
ಕಳೆದ ಕೆಲದಿನಗಳಿಂದ ಗಿರೀಶ್ ಮಟ್ಟಣ್ಣನವರ್ ಅವರ ವಿಚಾರಣೆ ಎದುರಿಸುತ್ತಿದ್ದಾರೆ.
ಜಯಂತ್ ಟಿ ಅವರು ವಿಚಾರಣೆಗಾಗಿ ಒಳ ದಾರಿಯಲ್ಲಿ ಎಸ್.ಐ.ಟಿ ಕಚೇರಿಗೆ ತೆರಳಿದ್ದಾರೆ. ಇಂದು ವಿಚಾರಣೆಗಾಗಿ ವಿಠಲ ಗೌಡ ಅವರಿಗೂ ಬರಲು ಎಸ್.ಐ.ಟಿ ತಂಡ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಈ ಮೂವರನ್ನೂ ವಿಚಾರಣೆ ಮುಗಿಸಿ ಭಾನುವಾರ ರಾತ್ರಿ ಹೊಂತಿರುಗಿದ್ದರು.
ಎಸ್.ಐ.ಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಗಳು ನಡೆಯುತ್ತಿದ್ದು ಇಂದು ಎಸ್.ಐ.ಟಿ ತನಿಖೆ ಯಾವರೀತಿ ಮುಂದುವರಿಯಲಿದೆ ಎಂಬುದು ಕುತೂಹಲದ ವಿಚಾರವಾಗಿದೆ. ನೇತ್ರಾವತಿ ಸ್ನಾನಘಟ್ಟದ
ಬಂಗ್ಲೆ ಗುಡ್ಡೆ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಇಲ್ಲಿ ಸ್ಥಳ ಪರಿಶಲನೆಗೆ ಎಸ್.ಐ.ಟಿ ತಂಡ ತೆರಳುವ ಸಾಧ್ಯತೆಯಿದೆ.







