
ಬೆಳ್ತಂಗಡಿ : ಬುರುಡೆ ಪ್ರಕರಣ ಮತ್ತು ಸುಜಾತ ಭಟ್ ಪ್ರಕರಣಗಳ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್ ಎಸ್.ಐ.ಟಿ ಕಚೇರಿಯಲ್ಲಿ ರಾತ್ರಿ ಪೂರ್ತಿ ವಿಚಾರಣೆ ಎದುರಿಸಿದ್ದಾನೆ.
ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಸೆ.3 ರಂದು ಸಂಜೆ ವಿಚಾರಣೆಗೆ ದಾಖಲೆಗಳ ಜೊತೆ ಹಾಜರಾಗಿದ್ದ ಯೂಟ್ಯೂಬರ್ ಅಭಿಷೇಕ್ ಗೆ ಸೆ.4 ರ ಬೆಳಗ್ಗಿನ ಜಾವದವರೆಗೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಅಭಿಷೇಕ್ ನ ವಿಚಾರಣೆ ಇಂದೂ ಮುಂದುರಿಯಲಿರುವುದಾಗಿ ತಿಳಿದು ಬಂದಿದೆ.
ಬುರುಡೆ ವಿಚಾರವಾಗಿ ಈತ ವಿಚಾರಣೆ ಎದುರಿಸುತ್ತಿರುವುದಾಗಿ ತಿಳಿದು ಬಂದಿದೆ.