





ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆ.ವಿ ಧನಂಜಯ್ ಹಾಗೂ ಇತರ ನ್ಯಾಯವಾದಿಗಳ ವಿರುದ್ದ ಎಸ್.ಐ.ಟಿ ಕಚೇರಿಗೆ ಬುಧವಾರ ದೂರು ನೋಡಲಾಗಿದೆ.
ಬೆಳ್ತಂಗಡಿ ಎಸ್.ಐ ಎಸ್.ಐ.ಟಿ ಕಚೇರಿಗೆ ಕಲ್ಮಂಜ ಗ್ರಾಮದ ನಿವಾಸಿ ರಾಜೇಂದ್ರ ಅಜ್ರಿ ದೂರು ನೀಡಿದ್ದು
ದೂರುದಾರ ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆವಿ ಧನಂಜಯ್ ಅವರಿಗೆ ಎಲ್ಲ ದಾಖಲೆಗಳನ್ನು ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ,
ಈ ಬಗ್ಗೆ ನ್ಯಾಯವಾದಿಗಳಾದ ಓಜಸ್ವಿ ಗೌಡ ಹಾಗೂ ಸಚಿನ್ ದೇಶಪಾಂಡೆ ಅವರು ನೀಡಿರುವ ಪತ್ರಿಕಾಹೇಳಿಕೆಗಳಲ್ಲಿಯೂ ಈ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ. ಇವರು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾಗಿರುವ ಚಿನ್ನಯ್ಯ ಹಾಗೂ ಇತರರು ರೂಪಿಸಿರುವ ಸಂಚಿನಲ್ಲಿ ಇವರೆಲ್ಲರೂ ಭಾಗಿಯಾಗಿರುವಂತೆ ಕಾಣಿಸುತ್ತಿದೆ ಅದೇರೀತಿ ಸಾಕ್ಷಿ ದೂರುದಾರ ಎಲ್ಲ ದಾಖಲೆಗಳನ್ನು ನ್ಯಾಯವಾದಿ ಕೆ.ವಿ ಧನಂಜಯ್ ಅವರಲ್ಲಿ ನಝಡಿರುವುದಾಗಿ ಹೇಳಿದ್ದು ಈ ದಾಖಲೆಗಳನ್ನು ಕೂಡಲೇ ಎಸ್.ಐ.ಟಿ ತಂಡ ಪರಿಶೀಲಿಸಬೇಕು ಹಾಗೂ ಈ ಸಂಚಿನಲ್ಲಿ ನ್ಯಾಯವಾದಿಗಳಾದ ಕೆ.ವಿ ಧನಂಜಯ್, ಓಜಸ್ವಿ ಗೌಡ, ಸಚಿನ್ ದೇಶಪಾಂಡೆ, ದಿವಿನ್, ಧೀರಜ್, ಮಂಜುನಾಧ್ ಅವರು ಭಾಗಿಯಾಗಿರುವ ಅನುಮಾನವಿದ್ದು ಇವರನ್ನು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.
ದೂರನ್ನು ಸ್ವೀಕರಿಸಿರುವ ಎಸ್.ಐ.ಟಿ ತಂಡ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಯದಾಗಿ ಭರವಸೆ ನೀಡಿದ್ದಾರೆ.
