Home ಅಪರಾಧ ಲೋಕ ಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಬಂಧನ ಪ್ರಕರಣ; ಚಿನ್ಯಯ್ಯ ಪರ  ಮಂಗಳೂರಿನಿಂದ ವಕೀಲರ ಆಗಮನ

ಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಬಂಧನ ಪ್ರಕರಣ; ಚಿನ್ಯಯ್ಯ ಪರ  ಮಂಗಳೂರಿನಿಂದ ವಕೀಲರ ಆಗಮನ

18
0

ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಬಂಧನ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯ ಪರ ವಕಾಲತ್ತು ನಡೆಸಲು ಮಂಗಳೂರಿನಿಂದ ನಾಲ್ಕು ಜನ ವಕೀಲರು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ್ದಾರೆ.

ಬೆಳ್ತಂಗಡಿ ಬುರುಡೆ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನನ್ನು ಆ.23 ರಂದು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದರು. ಈ ವೇಳೆ ಆರೋಪಿ ಚಿನ್ನಯ್ಯ ನ್ಯಾಯಾಧೀಶರಲ್ಲಿ ನನಗೆ ಉಚಿತ ವಕೀಲರು ಬೇಕೆಂದು ಮನವಿ ಮಾಡಿದ್ದ ಹಿನ್ನಲೆಯಲ್ಲಿ ಸೆ.3 ರಂದು ಕಸ್ಟಡಿ ಅಂತ್ಯವಾಗುವ ಹಿನ್ನಲೆಯಲ್ಲಿ ಮಂಗಳೂರು ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಿಶೋರ್ ನೇತೃತ್ವದಲ್ಲಿ ನಾಲ್ಕು ಜನ ವಕೀಲ ತಂಡ ಚಿನ್ನಯ್ಯ ಪರ ವಕಾಲತ್ತು ನಡೆಸಲು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ್ದು. ಸಂಜೆ 3 ಗಂಟೆಗೆ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಚಿನ್ನಯ್ಯನ ಪರ ವಕೀಲರ ತಂಡ ವಕಾಲತ್ತು ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here