



ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಸಾಕ್ಷಿದೂರುದಾರ ಚಿನ್ನಯ್ಯನನ್ನು ಎಸ್.ಐ.ಟಿ ತಂಡಮಹಜರಿಗಾಗಿ ಕರೆದೊಯ್ದಿದ್ದಾರೆ.
ಆತನಿಗೆ ಸಂಬಂಧಿಸಿದ ಸ್ಥಳಗಳಿಗೆ ಮಹಜರು ನಡೆಸಲು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಬೇಕಾದ ಅಗತ್ಯವಿದ್ದು ಆ.30 ರಂದು ಬೆಳಗ್ಗೆ 6 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.
ಆತನನ್ನು ಕರೆದುಕೊಂಡು ಹೋಗಿರುವುದು ಎಲ್ಲಿಗೆ ಎಂಬ ಬಗ್ಗೆ ಯಾವುದೆ ಮಾಹಿತಿಗಳು ಲಭ್ಯವಾಗಿಲ್ಲ


