


ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಸಂಬಂಧ ಎಸ್.ಐ.ಟಿ ಬಂಧಿಸಿರುವ ಸಾಕ್ಷಿ ದೂರುದಾರ ಚಿನ್ನಯ್ಯನಿಗೆ ಎರಡು ತಿಂಗಳು ಅಶ್ರಯ ನೀಡಿದ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಹಾಗೂ ಅವರ ಸಹೋದರನ ಮನೆಗೆ ಆ.26 ರಂದು ಸರ್ಚ್ ವಾರೆಂಟ್ ನೊಂದಿಗೆ ದಾಳಿ ನಡೆಸಿದ್ದ ಎಸ್.ಐ.ಟಿ ತಂಡ 27ಬೆಳಗ್ಗಿನ ವರೆಗೂ ಪರಿಶೀಲನೆ ಮಹಜರು ಕಾರ್ಯ ನಡೆಸಿದೆ. ಆರಂಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಬಂದ ಎಸ್.ಐ.ಟಿ ತಂಡ ರಾತ್ರಿಯವರೆಗೂ ಅಲ್ಲಿಯೇ ಪರಿಶೀಲನೆ ನಡೆಸಿದ್ದರು. ಬಳಿಕ ಸಾಕ್ಷಿ ದೂರುದಾರ ಕೆಲ ದಿನಗಳ ಕಾಲ ತಂಗಿದ್ದ ಮಹೇಶ್ ಶೆಟ್ಟಿ ಸಹೋದರ ಮೋಹನ್ ಶೆಟ್ಟಿಯ ನಿವಾಸಿದಲ್ಲಿ ರಾತ್ರಿ 10 ರಿಂದ ತಡರಾತ್ರಿ 2 ಗಂಟೆಯ ವರವೆಗೆ ಶೋಧ ನಡೆಸಿ ಚಿನ್ನಯ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡು ಹಿಂತಿರುಗಿದ್ದಾಗಿ ತಿಳಿದು ಬಂದಿದೆ.
