Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ತಾಲೂಕಿನಲ್ಲಿ ಕಾಡಾನೆ ದಾಳಿ ಸಂತ್ರಸ್ತರಿಗೆ ಶಾಸಕ ಹರೀಶ್ ಪೂಂಜ ಅವರಿಂದ ಪರಿಹಾರ ವಿತರಣೆ

ಬೆಳ್ತಂಗಡಿ; ತಾಲೂಕಿನಲ್ಲಿ ಕಾಡಾನೆ ದಾಳಿ ಸಂತ್ರಸ್ತರಿಗೆ ಶಾಸಕ ಹರೀಶ್ ಪೂಂಜ ಅವರಿಂದ ಪರಿಹಾರ ವಿತರಣೆ

0

ಬೆಳ್ತಂಗಡಿ; ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಅವರ ಕುಟುಂಬಕ್ಕೆ ಸೇರಿದಂತರ ಇತರ ಸಂತ್ರಸ್ತರಿಗೆ ಸರಕಾರದ ಸಹಾಯಧನವನ್ನು ಶಾಸಕ ಹರೀಶ್ ಪೂಂಜ ಅವರು ವಿತರಿಸಿದರು.
ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಅವರ ಪತ್ನಿ ಸುಜಾತರವರಿಗೆ ರೂ.20 ಲಕ್ಷ ಹಾಗೂ ಕಾಡನೆ ದಾಳಿಯಿಂದ ಬೆಳೆ ನಾಶಗೊಂಡ ಫಲಾನುಭವಿಗಳಾದ ಮಲವಂತಿಗೆ ಗ್ರಾಮದ ವಸಂತಿ ಇವರಿಗೆ ರೂ.81 ಸಾವಿರ ಚಾರ್ಮಾಡಿ ಗ್ರಾಮದ ಕುಂಞ ಮಲೆಕುಡಿಯ ರೂ.1.16 ಲಕ್ಷ ಮತ್ತು ಆನೆ ದಾಳಿಯಿಂದ ರಿಕ್ಷಾ ಹಾನಿಗೊಂಡ ಫಲಾನುಭವಿ ಧರ್ಮಸ್ಥಳ ಗ್ರಾಮದ ಬೋಳಿಯರು ನಿವಾಸಿ ದಿನೇಶ್ ರವರಿಗೆ ರೂ.20 ಸಾವಿರ ಪರಿಹಾರ ಮೊತ್ತ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಉಪವಿಭಾಗ ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಳ್ತಂಗಡಿ,ಉಪ್ಪಿನಂಗಡಿ ಅರಣ್ಯ ಉಪವಿಭಾಗದ ವಲಯ ಸಂರಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version