

ಬೆಳ್ತಂಗಡಿ: ರಾಜಸ್ಥಾನದ ಪ್ರಖ್ಯಾತ ಮುಸ್ಲಿಂ ಧಾರ್ಮಿಕ ಶ್ರದ್ಧಾ ಕೇಂದ್ರ ಅಜ್ಮೀರ್ ದರ್ಗಾ ಶರೀಫ್ ಗೆ ಯಾತ್ರೆ ಹೊರಟಿದ್ದ ಗುರುವಾಯನಕೆರೆ ಶಕ್ತಿ ನಗರದ ನಿವಾಸಿ(ಪೊಟ್ಟುಕೆರೆ) ಇಸ್‌ಹಾಕ್(37) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ
ಮಿತ್ರ ಅಶ್ರಫ್ ಕಾಪಿನಡ್ಕ ಅವರೊಂದಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ ಇವರಿಗೆ ಸುರತ್ಕಲ್ ತಲುಪುವಷ್ಟರಲ್ಲಿ ಭಾರೀ ಎದೆ ನೋವು ಕಾಣಿಸಿಕೊಂಡಿತು. ಅಲ್ಲೇ ರೈಲಿನಿಂದ ಇಳಿದು ಹೊರವಲಯದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕರೆ ತರುವ ವೇಳೆ ಅವರು ಅಸುನೀಗಿದರು.
ಇಸ್‌ಹಾಕ್ ಅವರು ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಮೃತರು ತಂದೆ, ತಾಯಿ, ಇಬ್ಬರು ಸಹೋದರರು, ಓರ್ವೆ ಸಹೋದರಿ, ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
