Home ರಾಜಕೀಯ ಸಮಾಚಾರ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಣಂದೂರು ಗ್ರಾಮ ದ ಮೊದಲೆ ಸಬರಬೈಲು ಪಡಂಗಡಿ ಸಂಪರ್ಕ ಸೇತುವೆ...

ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಣಂದೂರು ಗ್ರಾಮ ದ ಮೊದಲೆ ಸಬರಬೈಲು ಪಡಂಗಡಿ ಸಂಪರ್ಕ ಸೇತುವೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

0
22

ಬೆಳ್ತಂಗಡಿ. ತಾಲೂಕಿನಲ್ಲಿ ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಗೆ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಣಂದೂರು ಗ್ರಾಮ ದ ಮೊದಲೆ ಸಬರಬೈಲು ಪಡಂಗಡಿ ಸಂಪರ್ಕ ಸೇತುವೆ ಮುರಿದು ಬಿದ್ದು ಸಂಪರ್ಕ ಕಡಿತಗೊಂಡಿದ್ದು. ಈ ಸೇತುವೆಯು ಇಂದಿನವರೆಗೂ ದುರಸ್ತಿ ಆಗಿರುವುದಿಲ್ಲ.

ಇದೀಗ 2024 25 ನೇ ಸಾಲಿನಲ್ಲಿ ಲೆ.ಶೀ. 5054 ರಡಿ ರಾಜ್ಯದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದ ಹಾನಿಗಳಾದ ಗ್ರಾಮೀಣ ರಸ್ತೆ ಸೇತುವೆ ಹಾಗೂ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲು ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿದ್ದು ಸರ್ಕಾರ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ 10 ಕೋಟಿ ಅನುದಾನ ಬಿಡುಗಡೆಯಾಗಿದ್ದು. ಈ ಅನುದಾನದಲ್ಲಿ ಮೊದಲ ಆದ್ಯತೆಯಲ್ಲಿ ಈ ಸೇತುವೆಯನ್ನು ರಚನೆ ಮಾಡಬೇಕೆಂದು. ಮಾಲಾಡಿ ಸೋಣಂದೂರು ಪಡಂಗಡಿ ಗ್ರಾಮಸ್ಥರು ಇಂದು ಸೇತುವೆ ಕುಸಿದ ಜಾಗದಲ್ಲಿ ಪ್ರತಿಭಟನೆಯನ್ನು ಮಾಡಿದರು.

ಈ ಪ್ರತಿಭಟನೆಯಲ್ಲಿ,ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್, ಸದಸ್ಯರಾದ ಎಸ್ ಬೇಬಿ ಸುವರ್ಣ, ಬೆನಡಿಕ್ಟಾ ಮಿರಾಂದ, ಉಮೇಶ್ ಕೆಡಿಪಿ ಸದಸ್ಯ ಮೇಲ್ವಿನ್ ಸಿಕ್ವೆರಾ ಪಡಂಗಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶರೀಫ್ ಸಬರಬೈಲು, ಪ್ರಮುಖರಾದ ಹೃಷಿಕೇಶ್ ಜೈನ್ ಪಡಂಗಡಿ, ಮಹಮ್ಮದ್ ಅಲಿ ಕೋಲ್ಪೆದಬೈಲು ಮ್ಯಾಕ್ಸಿಮ್ ಸಿಕ್ವೆರಾ ಪಡಂಗಡಿ ಪ್ರಕಾಶ್ ಶೆಟ್ಟಿ, ಗೋಪಣ್ಣ ಪೂಜಾರಿ, ಬ್ಯಾಪಿಸ್ಟ್ ಕರ್ನಾಲಿಯೋ, ಶಬ್ಬೀರ್ ಕನ್ನಡಿಕಟ್ಟೆ, ಬಾಜಿಲ್ ಫೆರ್ನಾಂಡಿಸ್, ಉದಯ್ ಶೆಟ್ಟಿ ಜೆ.ಎಮ್ ಶಂಕರ್ ಮಾಲಾಡಿ, ಅಲ್ತಾಫ್ ಕೋಲ್ಪೆದಬೈಲು, ಅಹ್ಮದ್ ಪೊಮ್ಮಜೆ, ಆದಂ ಬ್ಯಾರಿ ಮೊದಲೆ, ಅಬ್ದುಲ್ ರಹಿಮಾನ್ ಮೊಧಲೆ, ಗೋಪಾಲ್ ಕೋಟ್ಯಾನ್,ಥೋಮಸ್ ಕರ್ನಾಲಿಯೋ, ಇಬ್ರಾಹಿಂ ಪಡಂಗಡಿ ಹಾಗೂ ಮಾಲಾಡಿ ಸೋಣಾಂದೂರು ಮತ್ತು ಪಡಂಗಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here