Home ರಾಷ್ಟ್ರ/ರಾಜ್ಯ ಧರ್ಮಸ್ಥಳ; ಹೆಣಗಳನ್ನು ಹೂತು ಹಾಕಿದ ಘಟನೆ ಎಸ್.ಐ.ಟಿ ತನಿಖೆಗೆ ರಾಜ್ಯ ಸರಕಾರ ಆದೇಶ; ಪ್ರಣವ್ ಕುಮಾರ್...

ಧರ್ಮಸ್ಥಳ; ಹೆಣಗಳನ್ನು ಹೂತು ಹಾಕಿದ ಘಟನೆ ಎಸ್.ಐ.ಟಿ ತನಿಖೆಗೆ ರಾಜ್ಯ ಸರಕಾರ ಆದೇಶ; ಪ್ರಣವ್ ಕುಮಾರ್ ಮೊಹಂತಿ ನೇತೃತ್ವದಲ್ಲಿ ತನಿಖೆ

0

ಬೆಳ್ತಂಗಡಿ; ಧರ್ಮಸ್ಥಳ ದಲ್ಲಿ ಹೆಣಗಳನ್ನು ಹೀತಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಠಾಣಾ ಅ.ಕ್ರ 39/2025ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡಕ್ಕೆ (ಎಸ್.ಐ.ಟಿ) ಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶ ನೀಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.
ಸದ್ರಿ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ದಿನಾಂಕ 19.07.2025 ರಂದು ಮಾನ್ಯ ಕರ್ನಾಟಕ ಸರ್ಕಾರವು ಅದೇಶಿಸಿರುತ್ತದೆ. ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತನಿಖಾ ತಂಡದ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ ಕುಮಾರ್ ಮೊಹಂತಿ ಅವರನ್ನು ನೇಮಿಸಲಾಗಿದ್ದು ತಂಡದಲ್ಲಿ IPS ಅಧಿಅಕರಿ ಎಂ.ಎನ್ ಅನುಚೇತ್. ಶ್ರೀಮತಿ ಸೌಮ್ಯ ಲತ IPS, ಹಾಗೂ ಜಿತೇಂದ್ರ ಕುಮಾರ್ IPS ಅವರನ್ನು ನೇಮಿಸಲಾಗಿದೆ

NO COMMENTS

LEAVE A REPLY

Please enter your comment!
Please enter your name here

Exit mobile version