
ಬೆಳ್ತಂಗಡಿ; ತಾಲೂಕಿನ ತೆಕ್ಕಾರು ಗ್ರಾಮಪಂಚಾಯತು ವ್ಯಪ್ತಿಯ ಬಾಜಾರು ಎಂಬಲ್ಲಿ ವ್ಯಕ್ತಿ ಯೊಬ್ಬ ತನ್ನ ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ
ಇಲ್ಲಿನ ನಿವಾಸಿ ಝೀನತ್ ಎಂಬವರೇ ಮೃತ ಮಹಿಳೆಯಾಗಿದ್ದಾರೆ. ಈಕೆಯ ಪತಿ ರಫೀಕ್ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ ಗುರುವಾರ ಬೆಳಗ್ಗೆ ಪತಿ ಪತ್ನಿಯರ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು ಈ ವೇಳೆ ಝೀನತ್ ಮೇಲೆ ಆಕೆಯ ಪತಿ ಚೂರಿಯಿಂದ ಇರಿದು ಹತ್ಯೆ ಮಾಡಿರುವುದಾಗಿ ಸ್ಥಳೀಯರು ನೀಡುವ ಮಾಹಿತಿಯಿಂದ ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ಮಡೆಸುತ್ತಿದ್ದು
ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ತಿಳಿದುಬರವೇಕಾಗಿದೆ