Home ರಾಜಕೀಯ ಸಮಾಚಾರ ಕಾರ್ಮಿಕರು ಬೀದಿಗಿಳಿಯುವಂತೆ ಮಾಡಿದೆ ರಾಜ್ಯ ಸರಕಾರಕ್ಕೆ ಕಾರ್ಮಿಕರು ಬುದ್ದಿ ಕಲಿಸವೇಕು: ಅನಿಲ್ ಕುಮಾರ್

ಕಾರ್ಮಿಕರು ಬೀದಿಗಿಳಿಯುವಂತೆ ಮಾಡಿದೆ ರಾಜ್ಯ ಸರಕಾರಕ್ಕೆ ಕಾರ್ಮಿಕರು ಬುದ್ದಿ ಕಲಿಸವೇಕು: ಅನಿಲ್ ಕುಮಾರ್

0


ಬೆಳ್ತಂಗಡಿ: ಸರಕಾರದ ಅವೈಜ್ಞಾನಿಕ ನೀತಿಯಿಂದ ಕಟ್ಟಡ ಕೆಲಸಕ್ಕೆ ಬೇಕಾದ ಮರಳು, ಕೆಂಪು ಕಲ್ಲು ಸಿಗದೆ ಕಟ್ಟಡದ ಕಾಮಗಾರಿಯು ನಡೆಯಿತ್ತಿಲ್ಲ ಇಂದರಿಂದಾಗಿ ಕಾರ್ಮಿಕರ ಬದುಕು ಅಂತ್ರವಾಗಿದ್ದು ಕಾರ್ಮಿಕರು ಬೀದಿಗಿಳಿಯುವಂತೆ ಸರಕಾರ ಮಾಡಿದೆ ಇಂತಹ ಸರಕಾರಕ್ಕೆ ಬುದ್ದಿಕಲಿಸುವ ಕಾರ್ಯವನ್ನು ಕಾರ್ಮಿಕರು ಮಾಡುತ್ತಾರೆ. ಒಂದು ವಾರದೊಳಗೆ ನಿಯಮ ಸಡಿಲಗೊಳಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಬ್ರಹತ್ ಪ್ರತಿಭಟನೆ ಮಾಡಲಾಗುವುದು ಎಂದು ಬಿ ಎಂ ಎಸ್ ನ ದ.ಕ ಜಿಲ್ಲಾ ಅದ್ಯಕ್ಷ ಅನಿಲ್ ಕುಮಾರ್ ಹೇಳಿದರು. ಅವರು ಸೋಮವಾರ ಬೆಳ್ತಂಗಡಿ ಮಿನಿ ವಿದಾನ ಸೌದದ ಎದುರು ಬಿ ಎಂ ಎಸ್ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ ಬೆಂಗಳೂರು ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು. ಬಿ ಎಂ ಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಮಾತನಾಡಿ ಕಾರ್ಮಿಕ ಸಚಿವರು ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆ. ಮರಳು , ಕೆಂಪುಕಲ್ಲು ಸಿಗದೆ ಕಾರ್ಮಿಕರ ಬದುಕು ನರಕಸದೃಶವಾಗಿದೆ ಇಂತಹ ಕಾರ್ಮಿಕ ಸಚಿವರು ರಾಜ್ಯಕ್ಕೆ ಅಗತ್ಯವಿಲ್ಲ ಎಂದರು. ತಕ್ಷಣ ಮರಳು, ಕೆಂಪುಕಲ್ಲಿನ ನಿಯಮ ಸಡಿಲಗೊಳಿಸಿ ಎಂದರು. ಕಳೆದ ಬಿಜೆಪಿ ಸರಕಾರ ಇರುವಾಗ ತಾಲೂಕಿಗೆ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಕ್ಕಿದೆ ಆದರೆ ಈಗಿನ ಸರ್ಕಾರ ಅದನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯ ಅಸಂಘಟಿತ ಕಾರ್ಮಿಕ ಸಂಘಗಳ ಮುಖಂಡ ಅಶೋಕ್ ಮಾತನಾಡಿ ಅರೋಗ್ಯ, ಶಿಕ್ಷಣಕ್ಕೆ ಹಣ ಮೀಸಲಿಡದೆ ಅನಗತ್ಯ ಯೋಜನೆಗಳಿಗೆ ಹಣವನ್ನು ಸರಕಾರ ವ್ಯಯಮಾಡುತ್ತಿದೆ ಎಂದರು. ಆದರೆ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಈ ಸರ್ಕಾರಕ್ಕೆ ಇಷ್ಷವಿಲ್ಲ ಇದು ಕಾರ್ಮಿಕ ವಿರೋದಿ ಸರಕಾರ ಎಂದರು. ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ, ವಿದಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಅದ್ಯಕ್ಷ ಶ್ರಿನಿವಾಸ್ , ಬೆಳ್ತಂಗಡಿ ಪಟ್ಟಣ ಪಂಚಾಯತ್ ಅದ್ಯಕ್ಷ ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟದ ರಾಜ್ಯ ಸಂಚಾಲಕ ಕುಮಾರ್ ವೈ ಚಿತ್ರದುರ್ಗ, ರಾಜ್ಯ ಗೌರವಾದ್ಯಕ್ಷ ಶಿವಣ್ಣ ಮೈಸೂರು, ರಾಜ್ಯ ಅದ್ಯಕ್ಷ ಎನ್ ರಮೇಶ್ ಚಿತ್ರದುರ್ಗ, ಉಪಾಧ್ಯಕ್ಷ ರಮೇಶ್ ಮರಿಗೌಡ್ರು ಬೆಂಗಳೂರು, ರಾಜ್ಯ ಪ್ರದಾನ ಕಾರ್ಯದರ್ಶಿ ಶಿವಕುಮಾರ್ ಗೌಡ ಗಂಗಾವತಿ ಕೊಪ್ಪಳ, ಚಂದ್ರು ಮೈಸೂರು, ಲಿಂಗರಾಜು ಮೈಸೂರು, ತಿಮ್ಮಣ್ಣ ಚಿತ್ರದುರ್ಗ, ನಾಗೇಶ್ ಮೈಸೂರು, ಮುಂತಾದವರು ಉಪಸ್ಥಿತರಿದ್ದರು. ನೂರಾರು ಕಾರ್ಮಿಕರು ಬಿ ಎಮ್ ಎಸ್ ಕಚೇರಿಯಿಂದ ಮೆರವಣಿಗೆ ನಡೆಸಿ ತಹಶಿಲ್ದಾರ್ ರಿಗೆ ಮನವಿ ಸಲ್ಲಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version