

ಬೆಳ್ತಂಗಡಿ: ಧರ್ಮಸ್ಥಳ ಮಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೆ.ಎಸ್.ಆರ್
ಟಿ.ಸಿ ಸಿಹಿ ಸುದ್ದಿಯನ್ನು ನೀಡಿದೆ ಇಂದಿನಿಂದ (ಜು3) ರಾಜ ಹಂಸ ಬಸ್ಸುಗಳು ಈ ಮಾರ್ಗವಾಗಿ ಸಂಚಾರ ಆರಂಭಿಸಲಿದೆ . ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು- ಧರ್ಮಸ್ಥಳ ಮಾರ್ಗವಾಗಿ ಜು.3 ರಿಂದ ರಾಜಹಂಸ ಸಾರಿಗೆ ಪರಿಚಯಿಸ ಲಾಗುತ್ತಿದೆ.
ಈ ಬಸ್ಸು ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬೆಳಗ್ಗೆ 6.30, 7, 8.30, 9, 11.15, 12.15, 2.30, 3.30, 5.30, 6.30ಕ್ಕೆ ಸಂಚರಿಸಲಿದೆ. ಅದೇ ರೀತಿ, ಧರ್ಮಸ್ಥಳದಿಂದ ಮಂಗಳೂರಿಗೆ ಬೆಳಗ್ಗೆ 6.30, 7, 9, 9.15, 11.30, 12, 2.45, 3.30, 4.30 ಮತ್ತು 5.30ಕ್ಕೆ ಸಂಚರಿಸಲಿದೆ.
ಈ ಬಸ್ಸು ಬಿ.ಸಿ. ರೋಡ್, ಬಂಟ್ವಾಳ, ಕಾರಿಂಜ ಕ್ರಾಸ್, ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗವಾಗಿ ಸಂಚರಿಸಲಿದ್ದು, 110 ರೂ. ಪ್ರಯಾಣ ದರ ಇರಲಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆ ತಿಳಿಸಿದೆ.
