Home ಅಪರಾಧ ಲೋಕ ಫೇಸ್ ಬುಕ್ ನಲ್ಲಿ ಅಶ್ಲೀಲ ಪೋಸ್ಟ್; ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನವೀನ್ ಗೌಡ ವಿರುದ್ಧ ಪ್ರಕರಣ...

ಫೇಸ್ ಬುಕ್ ನಲ್ಲಿ ಅಶ್ಲೀಲ ಪೋಸ್ಟ್; ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನವೀನ್ ಗೌಡ ವಿರುದ್ಧ ಪ್ರಕರಣ ದಾಖಲು

0

ಬೆಳ್ತಂಗಡಿ : ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿ ಪೋಸ್ಟ್ ಹಾಕಿದ ನವೀನ್ ಗೌಡ ಎಂಬಾತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ1 ರಂದು BNS 296 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ನೀಡಿರುವ ದೂರಿನಂತೆ ಪ್ರಕರಣ‌ದಾಖಲಿಸಲಾಗಿದೆ.
Naveen Gowda (https://facebook.com/naveen.gowda.938621) ಎಂಬ ಫೇಸ್ ಬುಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಮಹೇಶ್ ಶೆಟ್ಟಿ ಎಂತವರನ್ನು ಸಾಕಿಕೊಂಡಿದ್ದಾನೆ ಎಂದು ಅಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕವಾಗಿ ಎಲ್ಲರೂ ಬಳಸುವ ಫೇಸ್ ಬುಕ್ ಖಾತೆಗೆ ಅಶ್ಲೀಲ ಪದಗಳನ್ನು ಹಾಕಿರುತ್ತಾರೆ.ಆದ್ದರಿಂದ Naveen Gowda ಎಂಬ ಫೇಸ್ ಬುಕ್ ಖಾತೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.
ಅದರಂತೆ ಪ್ರಕರಣ‌ದಾಖಲಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version