Home ಅಪಘಾತ ಅರಸಿನಮಕ್ಕಿ; ಅಡಿಕೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಆಘಾತ; ವ್ಯಕ್ತಿ ಮೃತ್ಯು

ಅರಸಿನಮಕ್ಕಿ; ಅಡಿಕೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಆಘಾತ; ವ್ಯಕ್ತಿ ಮೃತ್ಯು

1
0

ಅರಸಿನಮಕ್ಕಿ: ಇಲ್ಲಿಯ ಎಂಜಿರ ಸಮೀಪ ತೋಟವೊಂದರಲ್ಲಿ ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ವೇಳೆ ದೋಂಟಿ ಹೆಚ್.ಟಿ. ಲೈನ್ ಗೆ ತಾಗಿ ಮದ್ದು ಸಿಂಪಡನೆ ಮಾಡುತಿದ್ದ ಉಡೈರೆ ಕೃಷ್ಣಪ್ಪ ಕುಲಾಲ್(49ವ) ರವರು ವಿದ್ಯುತ್ ಶಾಕ್ಯಾಗಿ ಮೃತ ಪಟ್ಟಿದ್ದಾರೆ.

ವಿದ್ಯುತ ಆಘಾತಕ್ಕೆ ಈಡಾಗಿ ಬಿದ್ದ ಕೂಡಲೇ ಕೃಷ್ಣಪ್ಪ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಪತ್ನಿ ಲಲಿತ, ಪುತ್ರ ಯತೀಶ್, ಪುತ್ರಿ ಶಿಲ್ಪಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here