Home ಸ್ಥಳೀಯ ಸಮಾಚಾರ ಮುಂಡಾಜೆ:ವಿದ್ಯುತ್ ಶಾಕ್ ಗಬ್ಬದ ಹಸು ಸಾವು

ಮುಂಡಾಜೆ:ವಿದ್ಯುತ್ ಶಾಕ್ ಗಬ್ಬದ ಹಸು ಸಾವು

0

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಗಬ್ಬದ ಹಸು ಸಾವನ್ನಪ್ಪಿದ ಘಟನೆ ನಡೆದಿದೆ.
ಮುಂಡಾಜೆ ಗ್ರಾಮದ ಗುಂಡಿ ಸೇತುವೆ ಸಮೀಪ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಹಸುವಿನ ಕೊಂಬಿಗೆ ತಾಗಿದ್ದು ಈ ವೇಳೆ ತಂತಿಯನ್ನು ಎಳೆದಾಡಿದ ಹಸು ಶಾಕ್ ನಿಂದ ಸ್ಥಳದಲ್ಲೇ ಮೃತಪಟ್ಟಿತು.
ಸ್ಥಳೀಯ ಕೊಂಬಿನಡ್ಕದ ಶಿವಪ್ಪ ಶೆಟ್ಟಿ ಎಂಬವರ 4ವರ್ಷ ಪ್ರಾಯದ ಹಸು ಇದಾಗಿದ್ದು,ಮೆಸ್ಕಾಂ ಅಧಿಕಾರಿಗಳು,ಪಶು ಇಲಾಖೆ ಅಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version