Home ಸ್ಥಳೀಯ ಸಮಾಚಾರ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಆಳ್ವಾಸ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಆಳ್ವಾಸ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಬೆಳ್ತಂಗಡಿ;  ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಿಜಾರ್ ಮತ್ತು ರಾಜ್ಯ ಪ್ರಶಸ್ತಿ ಪಡೆದ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ 22.06.2025 ರಂದು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಭಾ ಭವನದಲ್ಲಿ ನಡೆಯಿತು

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ  ಧರಣೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ ಫ್ರೆಂಡ್ಸ್ ಕ್ಲಬ್ ಸದಾ ಗ್ರಾಮಸ್ಥರ ಆರೋಗ್ಯದ ಬಗ್ಗೆ ಒತ್ತುಕೊಟ್ಟು ಆಳ್ವಾಸ್ ಆಸ್ಪತ್ರೆವತಿಯಿಂದ ವಾರಕ್ಕೊಮ್ಮೆ ಅರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆ ಯ ಏರ್ಪಾಡು ಮಾಡುತ್ತಿದೆ.50 ವರ್ಷಗಳು ಮೇಲ್ಪಟ್ಟವರ ರಕ್ತದೊತ್ತಡ ಹಾಗು ಮಧುಮೇಹದ ತಪಾಸಣೆಗಾಗಿ ತನ್ನ ಕ್ಲಬ್ ನ ಸಭಾಂಗಣವನ್ನು ಕೊಟ್ಟಿದ್ದು ಗ್ರಾಮಸ್ಥರು ಇದರ ಸದುಪಯೋಗ ಮಾಡಬೇಕೆಂದು ಮನವಿ ಮಾಡಿದರು.ನಮ್ಮ ಕ್ಲಬ್ ಯುವ ಚುಟುವಟಿಕೆ ಹಾಗು ಸಾಮಾಜಿಕ ಸೇವೆಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದು,ಸಮಾಜಮುಖಿ ಸೇವೆಗಳನ್ನು ಮುಂದುವರಿಸುತ್ತೇವೆ ಎಂದರು.

ಆಳ್ವಾಸ್ ಹೋಮಿಯೋಪತಿಕ್ ಆಸ್ಪತ್ರೆ ವೈದ್ಯ ಡಾ ಭರತ್ ಮಾತಾಡಿ, ಅರೋಗ್ಯ ಇದ್ದರೆ ಮಾತ್ರ ಜೀವನ ಮತ್ತು ನಮ್ಮ ಸಂಸ್ಥೆಯ ಅರೋಗ್ಯಶಿಬಿರದ ಸದುಪಯೋಗ ಪಡಿಸುವಂತೆ ಕರೆ ನೀಡಿ ಈ ನಿಟ್ಟಿನಲ್ಲಿ ನಿರಂತರವಾಗಿ ಸಹಕರಿಸುತ್ತಿರುವ ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಮತ್ತು ಮಾಜಿ ಅಧ್ಯಕ್ಷ ದಿವಂಗತ ಹರಿಪ್ರಸಾದ್ ರವರನ್ನು ಸ್ಮರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಡಾ ಪ್ರಶಾಂತ್ ,ಡಾ ಶಿವಕುಮಾರ್ ,ಪೆರಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀ ಎನ್ ಸೀತಾರಾಮ ರೈ ,ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ ,ಕ್ಲಬ್ ಅಧ್ಯಕ್ಷ ಶ್ರೀಪತಿ ಉಪಾದ್ಯಾಯ ,ಗ್ರಾ ಪo ಸದಸ್ಯ ಆನಂದ ಬಂಗೇರ ಕೊಡಂಗೇರಿ ಉಪಸ್ಥಿತರಿದ್ದರು.

ಶ್ರೀ ಚಂದ್ರ ಪೇರಿ ,ಭರತ್ ,ನಾಗೇಶ್ ಕೋಟಿಯಾನ್ ಹೊಸಂಗಡಿ ,ಸಚ್ಚಿದಾನಂದ ಪೆರಿಂಜೆ ,ದೇವದಾಸ್ ,ರಾಜೇಶ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಶ್ರೀಪತಿ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು.ಸುಜಿತ್ ವಂದಿಸಿದರು

NO COMMENTS

LEAVE A REPLY

Please enter your comment!
Please enter your name here

Exit mobile version