Home ಅಪರಾಧ ಲೋಕ ಬೆಳ್ತಂಗಡಿ : ಮದ್ದಡ್ಕದಲ್ಲಿ ಅಬಕಾರಿ ದಳದ ಕಾರ್ಯಾಚರಣೆ; ಗಾಂಜಾ ವಶಕ್ಕೆ; ಆರೋಪಿ ಮಹಮ್ಮದ್ ರಫೀಕ್ ಪರಾರಿ

ಬೆಳ್ತಂಗಡಿ : ಮದ್ದಡ್ಕದಲ್ಲಿ ಅಬಕಾರಿ ದಳದ ಕಾರ್ಯಾಚರಣೆ; ಗಾಂಜಾ ವಶಕ್ಕೆ; ಆರೋಪಿ ಮಹಮ್ಮದ್ ರಫೀಕ್ ಪರಾರಿ

0

ಬೆಳ್ತಂಗಡಿ : ಅಬಕಾರಿ ಉಪ ಅಧೀಕ್ಷಕರಾದ ಸಂತೋಷ ಮೋಡಗಿ ನೇತೃತ್ವದಲ್ಲಿ ಮದ್ದಡ್ಕ ಎಂಬಲ್ಲಿನ ಮನೆಯೊಂದರ ಮೇಲೆ ಜೂ.3 ರಂದು ರಾತ್ರಿ 8 ಗಂಟೆಗೆ ಅಬಕಾರಿ ದಳ ದಾಳಿ ಮಾಡಿ ಮನೆಯಲ್ಲಿ 2 ಪ್ಲಾಸ್ಟಿಕ್ ಡಬ್ಬದಲ್ಲಿ 250 ಗ್ರಾಂ ಗಾಂಜಾ ದೊರಕಿದ್ದು ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ
ದಾಳಿ ವೇಳೆ ಆರೋಪಿ ಮಹಮ್ಮದ್ ರಫೀಕ್ ಎಂಬಾತ ಪರಾರಿ ಆಗಿರುತ್ತಾನೆ. ಆರೋಪಿಯ ವಿರುದ್ಧ NDPS ಕಾಯ್ದೆ 1985 ರ ಕಲಂ 8C, 20(2)a ಹಾಗೂ 25 ರನ್ವಯ ಜೂ.3 ದಂದು ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಜೂ.4 ರಂದು ವರದಿ ಸಲ್ಲಿಸಲಾಗಿದೆ.

ಈ ಪ್ರಕರಣವನ್ನು ಬಂಟ್ವಾಳ ಉಪವಿಭಾಗದ ನಿರೀಕ್ಷಕರಾದ ನವೀನ್ ಕುಮಾರ್ ದಾಖಲಿಸಿ ಕೊಂಡಿದ್ದು. ಪ್ರಕರಣದ ಆರೋಪಿ ಮಹಮ್ಮದ್ ರಫೀಕ್ ಹಳೆಯ ಆರೋಪಿಯಾಗಿದ್ದು ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುತ್ತಾನೆ. ಪತ್ತೆಗಾಗಿ ಬಲೆ ಬಿಸಲಾಗಿದೆ.

ಬಂಟ್ವಾಳ ಉಪ ವಿಭಾಗದ ನಿರೀಕ್ಷಕರಾದ ನವೀನ್ ಕುಮಾರ್, ಉಪನಿರೀಕ್ಷಕರಾದ ಗಿರೀಧರ ಮಜಕರ್ ಹಾಗೂ ಬೆಳ್ತಂಗಡಿ ವಲಯ ಕಚೇರಿಯ ನಿರೀಕ್ಷಕರಾದ ಲಕ್ಷ್ಮಣ ಉಪ್ಪಾರ,ಉಪ ನಿರೀಕ್ಷಕರಾದ ಸಯ್ಯದ್ ಶಬೀರ್ ಹಾಗೂ ಸಿಬ್ಬಂದಿ ಶ್ರೀನಿವಾಸ್, ಕೃಷ್ಣ ಅಗಸರ,ಭೋಜ, ವಿನೊಯ್ ವಾಹನ ಚಾಲಕ ಕೇಶವ್ ನಾಯ್ಕ, ನವೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version