
ಬೆಳ್ತಂಗಡಿ; ತಾಲೂಕಿನ ಕಡಿರುದ್ಯಾವರ ಗ್ರಾಮದ ಶೆಟ್ಟಿಪಾಲು ಎಂಬಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟುಮಾಡಿದ ಘಾಟನೆ ಸಂಭವಿಸಿದೆ.
ಇಲ್ಲಿನ ನಿವಾಸಿಗಳಾದ ಚಿನ್ನಮ್ಮ, ಪುರಂದರ ಮೊಯಿಲಿ, ಹಾಗು ಶೈಜು ಎಂಬವರ ತೋಟಗಳಿಗೆ ಆನೆಗಳ ಹಿಂಡು ನುಗ್ಗಿದೆ. ತೋಟದಲ್ಲಿದ್ದ ತೆಂಗಿನ ಮರ, ಅಡಿಕೆಮರಗಳನ್ನು ಹಾಗೂ ಬಾಳೆಯನ್ನು ನೆಲಕ್ಕೆ ಉರುಳಿಸಿದೆ.
ಕಳೆದ ಕೆಲದಿನಗಳಿಂದಲೂ ಈ ಪ್ರದೇಶದಲ್ಲಿ ಕಾಡಾನೆಗಳು ತಿರುಗಾಟ ನಡೆಸುತ್ತಿದ್ದು ಆಗಾಗ ತೋಟಗಳಿಗೆ ನುಗ್ಗುತ್ತಿದೆ. ಕಾಡಾನೆಗಳ ಅಟ್ಟಹಾಸ ಮಿತಿ ಮೀರುತ್ತಿದ್ದು ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ.