Home ಸ್ಥಳೀಯ ಸಮಾಚಾರ ಲಾಯಿಲ; ಭಾರೀ ಮಳೆಗೆ ಗುಡ್ಡ ಕುಸಿತ ರಸ್ತೆ ಬಂದ್

ಲಾಯಿಲ; ಭಾರೀ ಮಳೆಗೆ ಗುಡ್ಡ ಕುಸಿತ ರಸ್ತೆ ಬಂದ್

31
0

ಬೆಳ್ತಂಗಡಿ: ಲಾಯಿಲ ಗ್ರಾಮದ ಅಂಕಾಜೆ ಸಮೀಪ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿ ರಸ್ತೆಗೆ ಮಣ್ಣು ಕಲ್ಕುಗಳು ಬಿದ್ದಿದ್ದು , ರಸ್ತೆ ಸಂಪೂರ್ಣ ಕಡಿತಗೊಂಡಿದೆ.

ತಾಲೂಕಿನಾದ್ಯಂತ ಸುರಿಯುತ್ತಿರುವ ಭೀಕರ ಮಳೆಗೆ ಲಾಯಿಲ ಗ್ರಾಮದ ಅಂಕಾಜೆ ಸಮೀಪ ಲಾಯಿಲ-ನಿನ್ನಿಕಲ್ಲು ಚಂದ್ಕೂರು ರಸ್ತೆಯಲ್ಲಿ ಬಂಡೆಕಲ್ಲು ಸಮೇತ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದು ಸಂಪರ್ಕ ಕಡಿತಗೊಂಡಿದೆ.

ಈ ಬಗ್ಗೆ ಸ್ಥಳೀಯ ಗ್ರಾಮಪಂಚಾಯತಿಗೆ ಮಾಹಿತಿ ನೀಡಲಾಗಿದ್ದು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here