


ಬೆಳ್ತಂಗಡಿ:ಅಳದಂಗಡಿ ಸಮೀಪದ ಪಿಲ್ಯ ಅಲೆಕ್ಕಿ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಯುತ್ತಿದ್ದಾಗ ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ಆನಂದ ಎಂ.ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಪ್ರವೀಣ್ ಬಳಂಜ,ರಮೇಶ್ ಅಲೆಕ್ಕಿ, ಜೋಯೆಲ್ ಕರಂಬಾರು,ರಾಜೇಶ್ ಪೂಜಾರಿ ಸುಲ್ಕೇರಿಮೊಗ್ರು,ಅವಿನಾಶ್ ಕುದ್ಯಾಡಿ,ತೇಜಸ್ ಗರ್ಡಾಡಿ,ಸುಂದರ ಮಾಳ,ಮೇಘರಾಜ್ ಗರ್ಡಾಡಿ,ಉಮೇಶ್ ಬಡಗಕಾರಂದೂರು ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೇ 24 ರಂದು ವೇಣೂರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಆನಂದ ಎಂ. ಹೊಸಂಗಡಿ ಗ್ರಾಮ ಪಂಚಾಯಿತಿ ಮರು ಚುನಾವಣಾ ಬಂದೋಬಸ್ತು ಕರ್ತವ್ಯದಲ್ಲಿರುವ ಸಮಯ ಪಿಲ್ಯ ಗ್ರಾಮದ ಅಲೆಕ್ಕಿ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋದಾಗ ಸುಮಾರು 20-25 ಜನ ಗುಂಪು ಸೇರಿ ಅಕ್ರಮವಾಗಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದರು. ಈ ವೇಳೆ ಕೆಲವರು ಪರಾರಿಯಾಗಿದ್ದು 9 ಜನರನ್ನು ವಶಕ್ಕೆ ಪಡೆಯಲಾಗಿದೆ.
ಕೋಳಿ ಅಂಕದಲ್ಲಿ ಪಣವಾಗಿ ಇಟ್ಟಿದ್ದ
14,900 ರೂ. ಹಾಗೂ ಸುಮಾರು 2,600 ರೂ. ಬೆಲೆಬಾಳುವ 5 ಬೇರೆ ಬೇರೆ ಗಾತ್ರದ ಹುಂಜ ಕೋಳಿ ಹಾಗೂ ಎರಡು ಬಾಲುಕತ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಬೆಳ್ತಂಗಡಿ ಎ.ಸಿ.ಜೆ.ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಕೋರಿಕೆ ಪತ್ರ ಸಲ್ಲಿಸಿ ನ್ಯಾಯಾಲಯದ ಅನುಮತಿ ಪಡೆದು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
