



ಬೆಳ್ತಂಗಡಿ; ನಿದ್ರೆ ಮಾತ್ರೆ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯ ಮಟ್ಟದ ಕಲಾವಿದ ಕಲಾ ಶಿಕ್ಷಕ ಮುಂಡಾಜೆಯ ಜಯರಾಮ್ ಕೆ(58) ಅವರು ಶುಕ್ರವಾರ ಸಂಜೆಯ ವೇಳೆ ಮೃತರಾಗಿದ್ದಾರೆ.
ಮೇ 10ರಂದು ಜಯರಾಮ್ ಹಾಗೂ ತಾಯಿ ಕಲ್ಯಾಣಿ ಅವರು ಮನೆಯಲ್ಲಿ ನಿದ್ದೆ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ತಾಯಿ ಕಲ್ಯಾಣಿ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದರು. ಜಯರಾಮ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಂಜೆಯ ವೇಳೆ ಮೃತಪಟ್ಟಿದ್ದಾರೆ.
