Home ಅಪರಾಧ ಲೋಕ ಬೆಳ್ತಂಗಡಿ : ಮುಸ್ಲಿಂ ಸಮುದಾಯದ ಅವಹೇಳನ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ವಿರುದ್ಧ...

ಬೆಳ್ತಂಗಡಿ : ಮುಸ್ಲಿಂ ಸಮುದಾಯದ ಅವಹೇಳನ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

0

ಬೆಳ್ತಂಗಡಿ : ಮಂಗಳೂರು ಬಜ್ಪೆಯಲ್ಲಿ ಕೊಲೆಯಾದ ಸುಹಾಸ್ ಶೆಟ್ಟಿಯ ನುಡಿನಮನ ಕಾರ್ಯಕ್ರಮ ಗುರುವಾಯನಕೆರೆಯಲ್ಲಿ ಮೇ.12 ರಂದು ನಡೆದಿದ್ದು ಈ ವೇಳೆ ಸಭಾ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಮುಸ್ಲಿಂ ಸಮೂದಾಯದ ಅವಹೇಳನ ಮಾಡಿದ ವಿಡಿಯೋ ವೈರಲ್ ಅಗಿರುವ ಬೆನ್ನಲ್ಲೇ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತ ಹರಿಪ್ರಸಾದ್ ಇರುವರ್ತಾಯ ಮೇ.12 ರಂದು ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಪೊಲೀಸರು ಮೇ.14 ರಂದು BNS 2023 (u/s 196(1)(a) ಅಡಿಯಲ್ಲಿ ಭಾರತಿ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದೂರಿನ ಸಾರಾಂಶ: ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಶೆಟ್ಟಿಯವರು ಸಾಯಿರಾಮ್ ಫ್ರೆಂಡ್ಸ್ ಸಂಘಟನೆ ವತಿಯಿಂದ ನಡೆದ ಸುಹಾಸ್ ಶೆಟ್ಟಿಗೆ ನುಡಿನಮನ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಗುರುವಾಯನಕೆರೆಯಲ್ಲಿ ಮುಸ್ಲಿಂರವರ ಸಂಖ್ಯೆ ಜಾಸ್ತಿ , ಮುಸ್ಲಿಂರವರಲ್ಲಿ ವ್ಯಾಪಾರ, ವ್ಯವಹಾರ ಮಾಡಬಾರದು , ಮುಸ್ಲಿಂರವರಲ್ಲಿ ವ್ಯಾಪಾರ ,ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕು ಬಹಿಷ್ಕರಿಸಬೇಕು, ಗುರುವಾಯನಕೆರೆಯಲ್ಲಿ ಬೆಳಗ್ಗೆ ಬೇಗ ಮುಸ್ಲಿಂ ರಿಕ್ಷಾ ಚಾಲಕರು ಬರುವುದು.ನಮ್ಮಲ್ಲಿ ಚಂದವಾಗಿ ಮಾತಾನಾಡಿ ನಮಗೆ ಗೊತ್ತಿಲ್ಲದೆ ಮೋಸ ಮಾಡುತ್ತಾರೆಂದು, ಮುಂತಾದ ತುಳು ಭಾಷೆಯಲ್ಲಿ ಮಾತಾನಾಡಿ ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಧರ್ಮ ಧರ್ಮಗಳ ಮಧ್ಯೆ ಕೋಮು ಸಂಘರ್ಷ ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ಸಮೂದಾಯವನ್ನು ಅವಹೇಳನಕಾರಿಯಾಗಿ ಬಿಂಬಿಸಿ ಮಾತಾನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಮೇ.12 ರಂದು ನೋಡಿ ಮೇ.14 ರಂದು ದೂರು ನೀಡಿರುತ್ತಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version