Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ತಾಲೂಕಿನಲ್ಲಿ ಬಂದ್ ಗೆ ಜನಜೀವನ ಅಸ್ತವ್ಯಸ್ತ, ಬಸ್ಸಿಗೆ ಕಲ್ಲು, ಟಯರ್ ಗೆ ಬೆಂಕಿ

ಬೆಳ್ತಂಗಡಿ: ತಾಲೂಕಿನಲ್ಲಿ ಬಂದ್ ಗೆ ಜನಜೀವನ ಅಸ್ತವ್ಯಸ್ತ, ಬಸ್ಸಿಗೆ ಕಲ್ಲು, ಟಯರ್ ಗೆ ಬೆಂಕಿ

0

ಬೆಳ್ತಂಗಡಿ; ತಾಲೂಕಿನಲ್ಲಿ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳು ಬಹುತೇಕ ಬಂದ್ ಆಗಿದ್ದು ಖಾಸಗಿ ವಾಹನಗಳು ಎಂದಿನಂತೆ ಓಡಾಟ ನಡೆಸಿದವು.
ತಾಲೂಕಿನಲ್ಲಿ ಹಲವೆಡೆ ರಸ್ತೆಯಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿ ಬಂದ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಕಕ್ಕಿಂಜೆ, ಮುಂಡಾಜೆ, ಹಾಗೂ ಗೇರುಕಟ್ಟೆಯಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿದ್ದಾರೆ.
ಬಸ್ಸಿಗೆ ಕಲ್ಲು;
ಗುರುವಾಯನಕೆರೆ ಜೈನ್ ಪೇಟೆ ಸಮೀಪ ಖಾಸಗಿ ಬಸ್ಸಿಗೆ ಕಲ್ಲು ಹೊಡೆಯಲಾಗಿದ್ದು ಬಸ್ಸಿನ ಮುಂದಿನ ಗಾಜು ಸಂಪೂರ್ಣ ಒಡೆದು ಹೋಗಿದೆ.
ಉಳಿದಂತೆ ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು, ಅಳದಂಗಡಿ, ಕೊಕ್ಕಡ ಧರ್ಮಸ್ಥಳ ಸೇರಿದಂತೆ ಬಹುತೇಕ ಪ್ರದೇಶ ಗಳಲ್ಲಿ ಅಂಗಡಿಗಳು ಸಂಪೂರ್ಣ ಬಂದ್ ಆಗಿದೆ‌ ಬೆಳಗ್ಗೆ ಕೆಲವು ಹೋಟೆಲ್ ಗಳು ತೆರೆದಿದ್ದರೂ ಬಳಿಕ ಅದನ್ನು ಮುಚ್ಚಲಾಯಿತು.
ಕೆ.ಎಸ್.ಆರಟಿ ಸಿ ಬಸ್ಸುಗಳು ಸ್ಥಳೀಯವಾಗಿ ಓಡಾಟ ನಡೆಸಿದವು ಧರ್ಮಸ್ಥಳ ದಿಂದ ಹೊರ ಜಿಲ್ಲೆಗೆ ಪ್ರಯಾಣಿಸುವ ಬಸ್ಸುಗಳು ಓಡಾಟ ನಡೆಸಿದವು ಮಂಗಳೂರಿಗೆ ಮಾತ್ರ ಬಸ್ ಗಳು ಓಡಾಟ ನಡೆಸಿಲ್ಲ. ಖಾಸಗಿ ವಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿರುವುದು ಕಂಡು ಬಂತು. ಪೊಲೀಸರು ತಾಲೂಕಿನ ಸೂಕ್ಷ್ಮ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version