Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ವಕ್ಫ್ ಸಂರಕ್ಷಣಾ ಹೋರಾಟ ಸಮಿತಿಯಿಂದ ಸಭೆ;   ಮೇ 9 ಕ್ಕೆ ಪ್ರಮುಖ ಸಾದಾತುಗಳ...

ಬೆಳ್ತಂಗಡಿ: ವಕ್ಫ್ ಸಂರಕ್ಷಣಾ ಹೋರಾಟ ಸಮಿತಿಯಿಂದ ಸಭೆ;   ಮೇ 9 ಕ್ಕೆ ಪ್ರಮುಖ ಸಾದಾತುಗಳ ಹಾಗೂ ಉಮರಾ ನಾಯಕರ ನೇತೃತ್ವದಲ್ಲಿ ಪ್ರತಿಭಟನಾ ಸಭೆಗೆ ನಿರ್ಧಾರ. ಪೋಸ್ಟರ್ ಬಿಡುಗಡೆ

0
4

ಬೆಳ್ತಂಗಡಿ: ಕೇಂದ್ರ ಸರಕಾರದ ವಿವಾದಿತ ವಕ್ಫ್ ತಿದ್ದುಪಡಿ ಕಾಯಿದೆಯ ವಿರುದ್ಧ ಬೆಳ್ತಂಗಡಿಯಲ್ಲಿ ವಕ್ಫ್ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ 2025 ನೇ ಮೇ 9 ರಂದು ಶುಕ್ರವಾರ ಮದ್ಯಾಹ್ನ 2:30 ಗಂಟೆಗೆ ಬೆಳ್ತಂಗಡಿಯ ಬಸ್ಸು ನಿಲ್ದಾಣದ ಬಳಿಯಲ್ಲಿ ಶಾಂತಿಯುತ ಪ್ರತಿಭಟನಾ ಸಭೆಯನ್ನು ಪ್ರಮುಖ ಸಾದಾತುಗಳ ಮತ್ತು ಉಮರಾ ನಾಯಕರ ನೇತೃತ್ವದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.

ಕಳೆದ ಸಭೆಯಲ್ಲಿ ತೀರ್ಮಾನಿಸಿದಂತೆ ಪ್ರಮುಖ ಸಾದಾತುಗಳನ್ನು ಬೇಟಿ ಮಾಡಿದ ಬಗ್ಗೆ ಮತ್ತು ತಾಲೂಕಿನಲ್ಲಿ ಪ್ರಸಕ್ತ ನಡೆಯುತ್ತಿರುವ ವಿವಿದ ಪ್ರಕರಣಗಳ ಬಗ್ಗೆ ಸಮುದಾಯವನ್ನು ಟಾರ್ಗೆಟ್ ಮಾಡಿ ಶಾಂತಿ ಭಂಗದಂತಹ ಘಟನೆಗಳನ್ನು ಪೋಲಿಸ್ ವರಿಷ್ಠಾಧಿಕಾರಿಗಳನ್ನು ಬೇಟಿ ಮಾಡಿ ದೂರು ನೀಡಿದ ಬಗ್ಗೆ ಸಭೆಗೆ ವಿವರಿಸಲಾಯಿತು.
ಸಭೆಯು ಸುಸೂತ್ರವಾಗಿ ನಡೆಯಲು ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಹಾಗೂ ಸಭೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಸಮಿತಿ ಸಂಚಾಲಕರಾದ ನವಾಝ್ ಶರೀಫ್ ಸದಸ್ಯರುಗಳಾದ ನಝೀರ್ ಅಝ್ಹರಿ ಬೊಳ್ಮಿನಾರ್,ಅಝೀಝ್ ಜುಹ್ರಿ ಕಿಲ್ಲೂರು,ನಝೀರ್ ಬೆಳ್ತಂಗಡಿ, ಬಿ.ಎಂ.ಹಮೀದ್ ಉಜಿರೆ, ಖಾಲಿದ್ ಪುಲಾಬೆ, ಅಬ್ಬೋನು ಮದ್ದಡ್ಕ, ಅಬೂಬಕ್ಕರ್ ಸಿದ್ದೀಕ್ ಕಾಜೂರು,ಮಹಮ್ಮದ್ ಹನೀಫ್ ಉಜಿರೆ,ಅಬ್ದುಲ್ ರಝಾಕ್ ಕನ್ನಡಿ ಕಟ್ಟೆ, ನಿಸಾರ್ ಕುದ್ರಡ್ಡ,ಅಶ್ರಫ್ ಆಲಿಕುಂಙಿ,ಅಬ್ದುಲ್ ಕರೀಮ್ ಗೇರುಕಟ್ಟೆ, ಹನೀಫ್ ಪುಂಜಾಲ್ ಕಟ್ಟೆ, ಕೆ.ಎಸ್.ಅಬ್ದುಲ್ಲ ಕರಾಯ, ಜಮೀರ್ ಸಅದಿ,ಸಿರಾಜ್ ಚಿಲಿಂಬಿ, ಆಲಿಯಬ್ಬ ಫುಲಾಬೆ, ಖಾಲಿದ್ ಕಕ್ಯಾನ,ನಸೀಬ್ ಉಜಿರೆ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here