ಬೆಳ್ತಂಗಡಿ; ದಿನಾಂಕ 25.04.2025 ನೇ ಶುಕ್ರವಾರದಿಂದ ರಿಂದ 3.5. 2025 ನೇ ಶನಿವಾರದವರೆಗೆ ತೆಕ್ಕಾರು ಗ್ರಾಮದಲ್ಲಿರುವ ಶ್ರೀ ಗೋಪಾಲಕೃಷ್ಣದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕು ಮಟ್ಟದಿಂದ ಹೊರ ಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನ ಸಭೆಯನ್ನು ನಡೆಸಲಾಯಿತು. ತಾಲೂಕಿನ ಪ್ರತಿ ಗ್ರಾಮದಿಂದ ಹೊರೆ ಕಾಣಿಕೆ ತೆಗೆದುಕೊಂಡು ಬರುವುವಂತೆ ವಿನಂತಿಸಲಾಯಿತು.ದಿನಾಂಕ 27.04.2025 ಆದಿತ್ಯವಾರ ಬೆಳಿಗ್ಗೆ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನ ಹಾಗೂ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಏಕಕಾಲದಲ್ಲಿ ಹೊರೆ ಕಾಣಿಕೆ ಉದ್ಘಾಟನೆಗೊಳ್ಳಲಿದ್ದು ಪ್ರತಿ ಗ್ರಾಮದ ಭಕ್ತರು ಹೊರೆಕಾಣಿಕೆ ಸಮರ್ಪಿಸಬೇಕೆಂದು ಹಾಗೂ 30.04.2025ನೇ ಬುಧವಾರದಂದು ಪ್ರತಿಷ್ಠಾ ದಿವಸದಂದು ತಾಲೂಕಿನ ಎಲ್ಲಾ ಹಿಂದೂ ಬಂಧುಗಳು ಬೃಹತ್ ಸಂಖ್ಯೆಯಲ್ಲಿ ಬರಬೇಕೆಂದು ವಿನಂತಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಬರೋಡ ಕಾರ್ಯಾಧ್ಯಕ್ಷರಾದ ಲಕ್ಷ್ಮಣ್, ಪ್ರಧಾನ ಸಂಚಾಲಕರಾದ ಹರೀಶ್ ಪೂಂಜ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಹಾಗೂ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಯಾದ ನವೀನ್ ನೆರಿಯ ಹಾಗೂ ತಾಲೂಕಿನ ಎಲ್ಲಾ ಧಾರ್ಮಿಕ ಮುಖಂಡರುಗಳು ಉಪಸ್ಥಿತರಿದ್ದರು.

