Home ವಿದೇಶಿ ಸುದ್ದಿಗಳು ಪೋಪ್ ಫ್ರಾನ್ಸಿಸ್‌ ನಿಧನ

ಪೋಪ್ ಫ್ರಾನ್ಸಿಸ್‌ ನಿಧನ

0

ರೋಮ್:‌ ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ , ರೋಮನ್ ಕ್ಯಾಥೋಲಿಕ್ ಧರ್ಮ ಸಭೆಯ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ (88) ಸೋಮವಾರ ನಿಧನರಾಗಿದ್ದಾರೆ.

ಸೋಮವಾರ (ಏ.21) ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ ಎಂದು ವ್ಯಾಟಿಕಾನ್ ನ ಕಾರ್ಡಿನಲ್ ಕೆವಿನ್ ಫಾರೆಲ್ ದೃಢ ಪಡಿಸಿದ್ದಾರೆ.

ಕಳೆದ ಕೆಲ ಸಮಯದಿಂದ ಅವರು ನ್ಯುಮೋನಿಯಾ, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು, ಈ ಸಂಬಂಧ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದಿನ ಕಳೆದಂತೆ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ವರದಿ ತಿಳಿಸಿದೆ.

ಅನಾರೋಗ್ಯ ಕಾರಣ ಅವರನ್ನು ಫೆ.14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಧ್ಯೆ ಕಿಡ್ನಿ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಆರೋಗ್ಯ ತೀವ್ರ ಹದಗೆಟ್ಟ ಕಾರಣ ವೆಂಟಿಲೇಟರ್‌ ಸಹಾಯದಿಂದ ಉಸಿರಾಡುತ್ತಿದ್ದರು ಮತ್ತೆ ಚೇತರಿಸಿದ ಅವರು ಆಸ್ಪತ್ರೆಯಿಂದ ಹಿಂತಿರುಗಿದ್ದರು.

ರೋಮನ್ ಕ್ಯಾಥೋಲಿಕ್ ಚರ್ಚಿನ ಮೊದಲ ಲ್ಯಾಟಿನ್ ಅಮೇರಿಕನ್ ಪೋಪ್ ಆಗಿದ್ದ ಅವರು, 2013 ರಲ್ಲಿ ಪೋಪ್ ಆಗಿ ಆಯ್ಕೆ ಆಗಿದ್ದರು.
ಕ್ಯಾಥೊಲಿಕ್ ಧರ್ಮಸಭೆಯಲ್ಲಿ ಹಲವಾರು ಮಹತ್ವದ ವದಲಾವಣೆಗಳನ್ನು ತಂದ ಪೋಪ್ ಅವರಾಗಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version