

ಬೆಳ್ತಂಗಡಿ; ಮಾಲಾಡಿ ಗ್ರಾಮದ ಕೊಲ್ಪೆದ ಬೈಲು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದವೇಳೆ ಮನೆಯ ಬೀಗ ಒಡೆದು ಒಳನುಗ್ಗಿದ ಕಳ್ಳರು ರೂ 14ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿದ ಘಟನೆ ಸಂಭವಿಸಿದೆ.
ಕೊಲ್ಪೆದ ಬೈಲು ನಿವಾಸಿ ವಸಂತಿ ಹೆಗ್ಡೆ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯವರು ಎ.20 ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಬೆಳ್ತಂಗಡಿ ಗೆ ತೆರಳಿದ್ದರು.ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನಬಾಗಿಲಿನ ಬೀಗ ಒಡೆದಿರುವುದು ಕಂಡು ಬಂದಿದೆ ಪರಿಶೀಲಿಸಿದಾಗ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮನೆಯ ಕೋಣೆಯ ಕಪಾಟಿನಲ್ಲಿ ಇರಿಸಲಾಗಿದ್ದ ರೂ 30,000ಸಾವಿರ ನಗದು ಹಾಗೂ 160.5 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ .
ಕಳವಾಗಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 13,72,000 ಎಂದು ಅಂದಾಜಿಸಲಾಗಿದೆ. ಒಟ್ಟು ನಗದು ಚಿನ್ನ ಸೇರಿ ರೂ 14,02,000 ಕಳ್ಳತನವಾಗಿದೆ.
ಘಟನೆಯ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಯ ಬಗ್ಗೆ ತಿದಿರುವ ಸ್ಥಳೀಯರ ಸಹಕಾರದಿಂದ ಕಳ್ಳತನ ನಡೆದಿದೆ ಎಂದು ಅನುಮಾನಿಸಲಾಗಿದ್ದು ಪೊಲೀಸರು ಎಲ್ಲ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
