


ಬೆಳ್ತಂಗಡಿ;ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕೇ ನಮಗೆ ಆದರ್ಶವಾಗಬೇಕು ಮತ್ತು ಸಂವಿಧಾನಕ್ಕೆ ಬದ್ದರಿರುವವರು ಅಸ್ಪೃಶ್ಯತೆಯನ್ನು ಕೂಡಾ ಆಚರಿಸಬಾರದು ಎಂದು ಪುತ್ತೂರು ಮಹಿಳಾ ಕಾಲೇಜು ಉಪನ್ಯಾಸಕರಾದ ಡಾ.ಯಶೋಧರ ಎಂ.ಕೆ ಅಂಡಿಂಜೆ ಹೇಳಿದರು.
ಅವರು ಇಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 134 ನೇ ಜಯಂತಿ ಅಂಗವಾಗಿ ನಡೆದ 7ನೇ ವರ್ಷದ ಭಾವೈಖ್ಯ ಸಮಾವೇಶವನ್ನುದ್ದೇಶಿಸಿ ಮಾತಾಡುತ್ತಿದ್ದರು. ಹಿಂದು ಧರ್ಮವನ್ನು ತಿದ್ದಿ ಸರಿಪಡಿಸಲು ಸಾದ್ಯವೇ ಇಲ್ಲ ಎಂಬ ದುಃಖದಿಂದ ಅವರು ಕೊನೆಯಲ್ಲಿ ಲಕ್ಷಾಂತರ ಬೆಂಬಲಿಗರೊಂದಿಗೆ ಭೌದ್ದ ಧರ್ಮ ಸೇರಿದರು. ದೇಶದ ಮಹಿಳೆಯರ ಸ್ವಾಭಿಮಾನ, ಸಮಾನತೆ, ಸ್ವತಂತ್ರ ಬದುಕಿಗೆ ಅವರ ಕೊಡುಗೆಯನ್ನು ಮಹಿಳೆಯರು ಎಂದಿಗೂ ಮರೆಯಬಾರದು ಎಂದರು. ನಮ್ಮ ಇಂದಿನ ನೆಮ್ಮದಿ ಬದುಕಿಗೆ ಕಾರಣೀಭೂತವಾದ ಸಮಗ್ರ, ವೈಜ್ಞಾನಿಕ ಸಂವಿಧಾನದ ಪಿತಾಮಹ ಅಂಬೇಡ್ಕರ್ ಎಂಬ ಸತ್ಯ ನಮಗೆ ಅರಿವಿರಬೇಕು. ಅದಕ್ಕಾಗಿ ಅವರ ಬದುಕಿನ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು. ಸಾಮಾಜಿಕ ಸಮಾನತೆಗಾಗಿ, ವ್ಯಕ್ತಿ ಗೌರವ ರಕ್ಷಣೆಗಾಗಿ ಅವರ ಕಾಳಜಿಯನ್ನು ನಾವೆಂದೂ ಮರೆಯಬಾರದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವಕೀಲರಾದ ಬಿ.ಎಂ.ಭಟ್ ಸಂವಿದಾನದ ಬಗ್ಗೆ, ಅದರ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ನಮ್ಮ ಇಂದಿನ ಬದುಕಿಗೆ ನೆಮ್ಮದಿಯ ಜೀವನಕ್ಕೆ ಸಂವಿಧಾನವೇ ಮೂಲ ಕಾರಣ ಎಂದ ಅವರು ಅದನ್ನು ಉಲ್ಲಂಘಿಸುವವರ ವಿರುದ್ದ ಸ್ವರ ಎತ್ತುವವರೇ ನಿಜವಾದ ಭಾರತೀಯರು ಎಂದರು. ಸಂವಿಧಾನ ಇದ್ದಂತೆಯೇ ಅದರ ವಿರುದ್ದವಾಗಿ ಆಡಳಿತ ನಡೆಸುವ ಆಳುವ ವರ್ಗದ ವಿರುದ್ದ ಹೋರಾಟ ನಡೆಸಿ ಸಂವಿಧಾನವನ್ನು ಉಳಿಸಿ ರಕ್ಷಿಸುವುದೇ ಡಾ. ಅಂಬೇಡ್ಕರ್ ಅವರಿಗೆ ನಾವು ಕೊಡುವ ನಿಜವಾದ ಗೌರವವಾಗಿದೆ ಮತ್ತು ದೇಶ ಪ್ರೇಮದ ದಾರಿಯಾಗಿದೆ ಎಂದರು.
ಡಿ.ವೈ.ಎಫ್.ಐ. ತಾಲೂಕು ಅಧ್ಯಕ್ಷರಾದ ಅಧಿತಿ ಸ್ವಾಗತಿಸಿದರು, ಡಿ.ವೈ.ಎಫ್.ಐ. ತಾಲೂಕು ಖಜಾಂಜಿ ಜಯಂತ ಪಾದೆಜಾಲು ವಂದಿಸಿದರು. ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಕಾರ್ಮಿಕ ಮುಖಂಡರುಗಳಾದ ಜಯರಾಮ ಮಯ್ಯ, ನೆಬಿಸಾ, ಸುಕುಮಾರ್ ದಿಡುಪೆ, ಜಯಶ್ರೀ, ಮಹಮ್ಮದ್ ಅನಸ್, ಪುಷ್ಪಾ, ನೀತಾ, ಡಿ.ವೈ.ಎಫ್.ಐ. ಮುಖಂಡ ಮಜೀದ್ ಕಕ್ಕಿಂಜೆ, ಡಿ.ಎಚ್.ಎಸ್ ಮುಖಂಡರಾದ ಬಾಬು ಕೊಯ್ಯೂರು, ಶ್ರೀಧರ ಮುದ್ದಿಗೆ, ಮಹಿಳಾ ಸಂಘದ ಕುಮಾರಿ, ಅಪ್ಪಿ, ವಿದ್ಯಾರ್ಥಿ ಸಂಘದ ಅನುಶ ಮೊದಲಾದವರು ಉಪಸ್ತಿತರಿದ್ದರು.
