


ಬೆಳ್ತಂಗಡಿ. ಡಾ. ಬಿ.ಆರ್ ಅಂಬೇಡ್ಕರ್ ಅವರು ವಿಶ್ವಕಂಡ ಧೀಮಂತ ವ್ಯಕ್ತಿಗಳಲ್ಲಿ ಅಗ್ರಗಣ್ಯರಾಗಿದ್ದಾರೆ, ಇವರ ವಿಚಾರಧಾರೆಗಳಿಗೆ,ಜ್ಞಾನ ಭಂಡಾರಕ್ಕೆ ವಿಶ್ವದಾದ್ಯಂತ ಅನುಯಾಯಿಗಳನ್ನು ಹೊಂದಿದ್ದಾರೆ.
ಸಮಾಜದ ಕಟ್ಟೆ ಕಡೆಯ ವ್ಯಕ್ತಿಯ ಆರ್ಥಿಕ,ಸಾಮಾಜಿಕ, ರಾಜಕೀಯ ಸಮಾನತೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿಯೊಬ್ಬರಿಗೂ ಸ್ವತಂತ್ರವಾದ ಜೀವನ ರೂಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ಪುದುವೆಟ್ಟು ಅಂಬೇಡ್ಕರ್ ಭವನ ಭವನದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ. ಉಜಿರೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ನಮಿತಾ ಪೂಜಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶ್ರೀಧರ್ ಕಳಂಜ. ಇಂಟೆಕ್ ಗ್ರಾಮೀಣ ಅಧ್ಯಕ್ಷರು ಅಶ್ರಫ್ ನೆರಿಯ. ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಕಾರ್ಯದರ್ಶಿ ರಜತ್ ಗೌಡ. ಬೊಮ್ಮಣ್ಣ ಗೌಡ ಪುದುವೆಟ್ಟು ಭೂ ನ್ಯಾಯ ಮಂಡಳಿ ಸಮಿತಿಯ ಸದಸ್ಯರು, ಅಬ್ದುಲ್ ಗಫ್ಫುರ್ ಪುಧುವೆಟ್ಟು ಮಾಜಿ ಎಪಿಎಂಸಿ ಉಪಾಧ್ಯಕ್ಷರು, ಸಂತೋಷ್ ಕೆ ಸಿ ಪುದುವೆಟ್ಟು,ರೊಯ್ ಪುದುವೆಟ್ಟು ಪಂಚಾಯತ್ ರಾಜ್ ಗ್ರಾಮೀಣ ಅಧ್ಯಕ್ಷರು, ಡಯಾನಾ ಪುದುವೆಟ್ಟು ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
