Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ಬೈಕ್ – ಟಿಪ್ಪರ್ ನಡುವೆ ಅಪಘಾತ; ಓರ್ವ ಸಾವು, ಸಾಹಸವಾರನಿಗೆ ಗಾಯ

ಬೆಳ್ತಂಗಡಿ : ಬೈಕ್ – ಟಿಪ್ಪರ್ ನಡುವೆ ಅಪಘಾತ; ಓರ್ವ ಸಾವು, ಸಾಹಸವಾರನಿಗೆ ಗಾಯ

20
0

ಬೆಳ್ತಂಗಡಿ : ಬೈಕ್ ಮತ್ತು ಟಿಪ್ಪರ್ ನಡೆವೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯ ಪಣೆಜಾಲಿನ ರತ್ನಗಿರಿ ಎಂಬಲ್ಲಿ ಏ.14 ರಂದು ಬೆಳಗ್ಗೆ ಗುರುವಾಯನಕೆರೆಗೆ ಬರುತ್ತಿದ್ದ ರಾಜ್ ಕಮಲ್ ಸಂಸ್ಥೆಯ ಟಿಪ್ಪರ್ ವಾಹನ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ ಅಪಘಾತ ನಡೆದಿದೆ. ಅಪಘಾತ ರಭಸಕ್ಕೆ ಬೈಕ್ ಸವಾರನ ತಲೆ,ಕಣ್ಣು ಹೊರಕ್ಕೆ ಬಂದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಹಸವಾರ ಸಣ್ಣಪುಟ್ಟ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಕೂಡ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಇದ್ದ ಕಾರಣ ಮೋಹನ್ ಎಂಬಾತನನ್ನು ಉಪ್ಪಿನಂಗಡಿಗೆ ಟ್ರಾಪ್ ಮಾಡಲು ಉಪೇಂದ್ರ ಬೈಕ್ ನಲ್ಲಿ ಕರೆದುಕೊಂಡು ಹೋಗುವಾಗ ಘಟನೆ ನಡೆದಿದೆ.

ಬೈಕ್ ಸವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ನಿವಾಸಿ ಉಪೇಂದ್ರ (29) ಸಾವನ್ನಪ್ಪಿದ್ದು,ಸಹಸವಾರ ಪುತ್ತೂರು ತಾಲೂಕಿನ ಕಾಣಿಯೂರು ಮೋಹನ್(29) ಸಣ್ಣ ಪುಟ್ಟ ಗಾಯವಾಗಿದ್ದು ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ಉಪೇಂದ್ರನ ಶವವನ್ನು ಬೆಳ್ತಂಗಡಿ ತಾಲೂಕಿನ ಸರಕಾರಿ ಶಾವಗಾರಕ್ಕೆ ಸಾಗಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಸಬ್ ಇನ್ಸ್ಪೆಕ್ಟರ್ ಮತ್ತು ತಂಡ ಘಟನಾ ಸ್ಥಳಕ್ಕೆ ಹಾಗೂ ಬೆಳ್ತಂಗಡಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

LEAVE A REPLY

Please enter your comment!
Please enter your name here