Home ಶಾಲಾ ಕಾಲೇಜು ಮುಂಡಾಜೆ; ಮೂರು ಕೋಟಿ ವೆಚ್ಚದ ಫುಟ್ಬಾಲ್ ಕ್ರೀಡಾಂಗಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

ಮುಂಡಾಜೆ; ಮೂರು ಕೋಟಿ ವೆಚ್ಚದ ಫುಟ್ಬಾಲ್ ಕ್ರೀಡಾಂಗಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

0

ಮಚ್ಚಿನ,ಮುಂಡಾಜೆ ಮೊದಲಾದ ಕಡೆಗೆ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಗುಣಮಟ್ಟದ ಶಿಕ್ಷಣದ ಜತೆ,ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡುತ್ತಿವೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಪೂರಕ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಸೋಮವಾರ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 3 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಫುಟ್ಬಾಲ್ ಕ್ರೀಡಾಂಗಣದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕ್ರೀಡಾಪಟುಗಳನ್ನು ಸೃಷ್ಟಿಸುವ ಸಾಯಿ ಯಂತೆ ಇಲ್ಲಿನ ಶಾಲೆಯು ಅಭಿವೃದ್ಧಿ ಹೊಂದಿ ಉತ್ತಮ ಕ್ರೀಡಾಪಟುಗಳನ್ನು ನೀಡುವುದರ ಮೂಲಕ ರಾಷ್ಟ್ರ,ರಾಜ್ಯಮಟ್ಟದಲ್ಲಿ ಹೆಸರು ಗಳಿಸುವಂತಾಗಬೇಕು.

ಯಡಿಯೂರಪ್ಪನವರ ಸರಕಾರದ ಆಡಳಿತದಲ್ಲಿ ವಸತಿ ಶಾಲೆಗಳನ್ನು ಕ್ರೀಡಾ ಶಾಲೆಗಳಾಗಿ ರೂಪಿಸುವ ಯೋಜನೆಯಂತೆ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಗುರುತಿಸಲಾಗಿತ್ತು ಎಂದರು.
ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ, ಉಪಾಧ್ಯಕ್ಷೆ ಸುಮಲತಾ ಶೆಟ್ಟಿ, ಸದಸ್ಯರು, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ,ರಂಜಿನಿ ರವಿ, ತಾಪಂ ಮಾಜಿ ಸದಸ್ಯರಾದ ಕೊರಗಪ್ಪ ಗೌಡ ಅರಣಪಾದೆ,ಲೀಲಾವತಿ,ಮುಂಡಾಜೆ ಪ್ಯಾಕ್ಸ್ ನಿರ್ದೇಶಕರಾದ ಕಜೆ ವೆಂಕಟೇಶ್ವರ ಭಟ್, ಅಶ್ವಿನಿ ಎ. ಹೆಬ್ಬಾರ್, ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜಯಂತ್, ಹಿರಿಯರಾದ ಅಡೂರು ವೆಂಕಟ್ರಾಯ, ಗೋಪಾಲಕೃಷ್ಣ ರಾವ್ ಅಡೂರು, ಶಾಲೆಯ ಪ್ರಿನ್ಸಿಪಾಲ್ ಮುರಳೀಧರ, ಗುತ್ತಿಗೆದಾರ ಕಂಪನಿಯ ಅವಿನಾಶ್ ಹೈದರಾಬಾದ್ ಮತ್ತಿತರರು ಉಪಸ್ಥಿತರಿದ್ದರು.
ಮುಂಡಾಜೆ ಪ್ಯಾಕ್ಸ್ ನಿರ್ದೇಶಕ ಚೆನ್ನಕೇಶವ ಅರಸಮಜಲು ಕಾರ್ಯಕ್ರಮ ನಿರೂಪಿಸಿದರು.
ಗ್ರಾಪಂ ಸದಸ್ಯೆ ರಂಜಿನಿ ವಂದಿಸಿದರು.
ಬಾಕ್ಸ್
ಮೂರು ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಈ ಫುಟ್ಬಾಲ್ ಕ್ರೀಡಾಂಗಣವು ಸಿಂಥೆಟಿಕ್ ಟರ್ಫ್,ಡ್ರೈನೇಜ್ ಸೌಲಭ್ಯ, ಇತ್ಯಾದಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೂ ಅನುಕೂಲವಾಗುವಂತೆ ನಿರ್ಮಾಣಗೊಳ್ಳಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version