Home ಸ್ಥಳೀಯ ಸಮಾಚಾರ ಮಡಂತ್ಯಾರು; ಕ್ಯಾಥೋಲಿಕ್ ಸಭಾ ಬೆಳ್ತಂಗಡಿ ವಲಯದ ಕುಟುಂಬ ಸಹಮಿಲನ

ಮಡಂತ್ಯಾರು; ಕ್ಯಾಥೋಲಿಕ್ ಸಭಾ ಬೆಳ್ತಂಗಡಿ ವಲಯದ ಕುಟುಂಬ ಸಹಮಿಲನ

0

ಬೆಳ್ತಂಗಡಿ; ಕ್ಯಾಥೋಲಿಕ್ ಸಭಾ ಮಂಗಳೂರು ಪ್ರಧೇಶ್ (ರೀ ) ಬೆಳ್ತಂಗಡಿ ವಲಯ ಕಾರ್ಯಕಾರಿ ಕುಟುಂಬ ಸಹಮಿಲನ ಮಡಂತ್ಯಾರ್ ಘಟಕ ದಲ್ಲಿ ಅದ್ದೂರಿ ಯಾಗಿ ನೆರವೇರಿತು. ಕಾರ್ಯಕ್ರಮಧ ಉದ್ಘಾಟನೆ ಯನ್ನು ವಲಯ ಆಧ್ಯಾತ್ಮಿಕ ನಿರ್ದೇಶಕರು ಅತೀ ವಂಧನಿಯಾ ಸ್ವಾಮಿ ವಾಲ್ಟರ್ ಡಿ ಮೆಲ್ಲೋ ಮೇಲ್ಲೋ ಉದ್ಘಾಟಿಸಿ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ತಕ್ಷತೆಯನ್ನು ಅದ್ಯಾಕ್ಷರಾದ ಲಿಯೋ ರೋಡ್ರಿಗಸ್ ಅವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸೆಂಟ್ರಲ್ ಕಮಿಟಿ ಯ ಮಾಜಿ ಅಧ್ಯಕ್ಷರಾದ ಫ್ಲೇವಿ ಡಿಸೋಜ ನಾಯಕತ್ವ ಬೆಳೆಸಿಕೊಳ್ಳುವ ಬಗ್ಗೆ ಮಾಹಿತಿನೀಡಿದರು. ಮಡಂತ್ಯಾರ್ ಚರ್ಚ್ ನಾ ಪ್ರಧಾನ ಧರ್ಮಗುರುಗಳಾದ ವಂದನೀಯ ಡಾ. ಸ್ಟೇನಿ ಗೋವಿಯಾಸ್. ಪ್ರಾರ್ಥನವಿಧಿ ನೆರವೇರೆಸಿದರು.. ಸೆಂಟ್ರಲ್ ಕಮಿಟಿ ಯ ಅದ್ಯಾಕ್ಷರಾದ ಆಲ್ವಿನ್ ಡಿ ಸೋಜಾ ಸಂದೇಶ ನೀಡಿದರು.


ಕಾರ್ಯಕ್ರಮ ದಲ್ಲಿ, 12 ಘಟಕದ ಅಧ್ಯಕ್ಷರುಗಳನ್ನು, ವಲಯದ ಮಾಜಿ ಅದ್ಯಾಕ್ಷರಿಗೆ , ಸೆಂಟ್ರಲ್ ಕಮಿಟಿಯ ಮಾಜೆ ಅದ್ಯಕ್ಷ ರನ್ನು ಹಾಗೂ ಮಾಜಿ ಪದಾಧಿಕಾರಿಗಳನ್ನು ವಲಯದ ಪ್ರಸ್ತುತ ಪದಾಧಿಕಾರಿಗಳನ್ನು ವಲಯದ ಭಾಷಣ ಸ್ಪರ್ಧೆಯ ಸಂಚಾಲಕರನ್ನು ಗೌರವಿಸಲಾತು. ವಲಯದ ಪ್ರಸ್ತುತ ಸಹಕಾರಿ ಸಂಘದ ಅದ್ಯಕ್ಷರಾದ ಜೋಯಲ್ ಮೆಂಡೋನ್ಸ. ನಿರ್ದೇಶಕರಾದ,‌ ಅಮಿತ ಲೋಬೊ ಹಾಲುಉತ್ಪಾದಕರ ಸಂಘದ ನಿರ್ದೇಶಕರಾದ ಲೂಸಿ ಆಲ್ಬುಕರ್ಕ್, ಮೈಕಲ್ ಡಿಸೊಜ, ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ, ಕೃಷಿ ಕ್ರೇತ್ರದಲ್ಲಿ ಸಾಧನೆ ಮಾಡಿದ ಜಾನ್ ಡಿ ಸೋಜ ರವರನ್ನು ಸನ್ಮಾನಿಸಲಾಯಿತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೀನ ಫೆರ್ನಾಂಡೀಸ್. ವಿಲೂನಾ ಡಿ ಕುನ್ನ ಉಜೆರೆ ಇವರನ್ನು ಸನ್ಮಾನಿಸಲಾಯಿತು.


ಶಿಕ್ಷಣ ಕ್ಸತ್ರ ದಲ್ಲಿ ಗೋಲ್ಡ್ ಮೆಡಲ್ ಪಡೆದ ಪ್ರಿಮಲ್ ನಿಶಾ ರೋದ್ರಿಗಸ್ ರವರನ್ನು ಸನ್ಮಾನಿಸಲಾಯಿತು. ವಲಯ ಅಧ್ಯಾತ್ಮಿಕ ನಿರ್ದೇಶಕರಾದ ಅ.ವಂದನೀಯ ವಾಲ್ಟರ್ ಡಿ ಮೆಲ್ಲೋ ಅವರ 70 ನೇ ಹುಟ್ಟು ಹಬ್ಬ ವನ್ನು ಕೇಕ್ ಕತ್ತರಿಸುವ ಮೂಲಕ ಈ ಸಂದರ್ಭದಲ್ಲಿ ಆಚರಿಸಲಾಯಿತು. ವಲಯ ಅದ್ಯಾಕ್ಷರಾದ ಲಿಯೋ ರೋಡ್ರಿಗಸ್ ರವರ 2 ವರ್ಷ ದ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು.
ವಲಯ ಉಪಾಧ್ಯಕ್ಷ ಸುನಿಲ್ ಮೋನಿಸ್ ಸ್ವಾಗತಿಸಿದರು.
ವಿನ್ಸಿ ಮೋರಸ್ ಕಾರ್ಯಕ್ರಮ ನಿರೂಪಿಸಿದರು. ಫಿಲಿಪ್‌ಡಿ ಕುನ್ನ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version