Home ರಾಜಕೀಯ ಸಮಾಚಾರ ಬೆಳ್ತಂಗಡಿ; ಜೆ.ಎಂ.ಎಸ್. ವತಿಯಿಂದ ಮಹಿಳಾ ದಿನಾಚರಣೆ

ಬೆಳ್ತಂಗಡಿ; ಜೆ.ಎಂ.ಎಸ್. ವತಿಯಿಂದ ಮಹಿಳಾ ದಿನಾಚರಣೆ

0

ಬೆಳ್ತಂಗಡಿ; ಅಖಿಲಭಾರತ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ‌ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ಮಂಗಳೂರಿನ ಸಮಾಜಿಕ ಕಾರ್ಯ ಕರ್ತೆ ವತ್ಸಲ ನಾಯಕ್ ಮಾತನಾಡಿ ಮಹಿಳೆಯರ ಶೋಷಣೆ,‌ ಲಿಂಗತಾರತಮ್ಯ ಸಮಾಜದಲ್ಲಿ,‌ಕುಟುಂಬದಲ್ಲಿ ನಮಗೆ ಅರಿವಿಲ್ಲದ ಹಾಗೇ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರಿಂದಲೇ ಬದಲಾವಣೆ ಆರಂಭವಾಗಬೇಕಾಗಿದೆಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಮಕ್ಕಳನ್ನು ಜಾಗೃತರಾಗಿಸುವ ಕಾರ್ಯ ಮಾಡಬೇಕು. ಲಿಂಗತಾರತಮ್ಯವನ್ನು ನಮ್ಮ ಮನೆಯಿಂದಲೇ ಮೊದಲು ಹೋಗಲಾಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ರಿಕ್ಷಾ ಚಾಲಕರಾದ ಕೆಮ್ಮಟೆಯ ಹರಿಣಾಕ್ಷಿ ರತ್ನಾಕರ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಎಂ.ಎಸ್ ತಾಲೂಕು ಸಮಿತಿ ಅಧ್ಯಕ್ಷೆ ಕಿರಣ ಪ್ರಭ ವಹಿಸಿದ್ದರು.
ವೇದಿಕೆಯಲ್ಲಿ ಜೆ.ಎಂ.ಎಸ್. ದ.ಕ ಜಿಲ್ಲಾ ಸಮಿತಿ ಅಧ್ಯಕ್ಷೆ ಜಯಂತಿ ಬಿ.ಶೆಟ್ಟಿ, ತಾಲೂಕು ಕಾರ್ಯದರ್ಶಿ ಕುಮಾರಿ, ಮುಖಂಡರುಗಳಾದ ಜಯಶ್ರೀ, ಅಶ್ವಿತಾ, ಹಾಗೂ ಇತರರು ಇದ್ದರು.
ಕುಮಾರಿ ಸ್ವಾಗತಿಸಿದರು, ಪುಷ್ಪ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version