Home ಶಾಲಾ ಕಾಲೇಜು ಉಜಿರೆ ಎಸ್ ಡಿಎಂ ಕಾಲೇಜು ಜ.17 ಹಾಗೂ 18ರಂದು ‘ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ’...

ಉಜಿರೆ ಎಸ್ ಡಿಎಂ ಕಾಲೇಜು ಜ.17 ಹಾಗೂ 18ರಂದು ‘ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ’ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣ

0

ಬೆಳ್ತಂಗಡಿ; “ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆ ಪಾತ್ರ ಎಂಬ ವಿಚಾರದ ಬಗ್ಗೆ ಉಜಿರೆಯ ಎಸ್ ಡಿ ಎಂ ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗವು ಜ. 17 ಹಾಗೂ 18ರಂದು ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಿದೆ” ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ.ಎ. ಕುಮಾರ ಹೆಗ್ಡೆ ಹೇಳಿದರು.
ಸೋಮವಾರ ಕಾಲೇಜಿನಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಜ‌.17ರಂದು ಬೆಳಿಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಆಸ್ಟ್ರೇಲಿಯಾ ನ್ಯಾಷನಲ್ ವಿಶ್ವವಿದ್ಯಾಲಯದ ಡಾ. ಕಾಲಿಯಪ್ಪ ಕಾಲಿರಾಜನ್ ಹಾಗೂ ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಾಟಕದ ಒಂಬುಡ್ಸ್ ಮನ್ ಡಾ. ಬಾಲು ಕೆಂಚಪ್ಪ, ಉದ್ಯಮಿ ಶಶಿಧರ ಶೆಟ್ಟಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಿನ್ಸಿಪಾಲ್ ಡಾ. ಬಿ.ಎ. ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ” ಎಂದು ಹೇಳಿದರು.
“ಮಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ರಾಜ್ಯ ಯೋಜನಾ ಆಯೋಗದ ಸದಸ್ಯ ಡಾ. ಜಿ.ವಿ.ಜೋಷಿ, ಮೈಸೂರು ಎಸ್ ಡಿಎಂ ಮ್ಯಾನೇಜ್ಮೆಂಟ್ ಸಂಸ್ಥೆಯ ಡಾ.ವೆಂಕಟರಾಜು, ಎಸ್ ಕೆ ಡಿ ಆರ್ ಡಿ ಪಿ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್., ನವದೆಹಲಿಯ ಜೆಎನ್ ಯು ಸಂಸ್ಥೆಯ ಡಾ. ರಮೇಶ್ ಸಾಲಿಯಾನ್, ನಿಟ್ಟೆ ವಿವಿಯ ಡಾ ಎ.ಪಿ. ಆಚಾರ್, ಶಿವಮೊಗ್ಗದ ನಿವೇದನ್ ನೆಂಪೆ, ನಿಡ್ಲೆಯ ಉದ್ಯಮಿ ಆತಿಷ್ಯ ಜೈನ್ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಲಿರುವರು.
ಬೆಂಗಳೂರಿನ ಐ ಎಸ್ ಇಸಿ ಸಂಸ್ಥೆಯ ಪ್ರೊ. ಎಸ್. ಮಹದೇಶ್ವರನ್ ಎಸ್ ಡಿಎಂ ಕಾಲೇಜಿನ ನಿವೃತ್ತಿ ಪ್ರಿನ್ಸಿಪಾಲ್ ಡಾ. ಜಯಕುಮಾರ್ ಶೆಟ್ಟಿ, ಮೈಸೂರಿನ ಜೆ ಎಸ್ ಎಸ್ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ರಾಕೇಶ್ ಟಿ.ಎಸ್. ಸಂಶೋಧನಾ ಪ್ರಬಂಧ ಮಂಡನೆಯ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಜ.18ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸರಕಾರದ ಅಸೆಟ್ ಮೊನಿಟೈಸೇಷನ್ ತಜ್ಞ ಸಮಿತಿ ಸದಸ್ಯ ಬೆಂಗಳೂರಿನ ಪ್ರೊ. ಕೃಷ್ಣರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಸ್ ಡಿ ಎಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಡಿ.ಹರ್ಷೇಂದ್ರ ಕುಮಾರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕ ಕೆ.ಎನ್. ಜನಾರ್ಧನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕಡೆಯಿಂದ 40ಕ್ಕೂ ಅಧಿಕ ಸಂಶೋಧನಾ ನಿರತರು ಪ್ರಬಂಧ ಮಂಡಿಸಲಿದ್ದಾರೆ. ದೇಶದಲ್ಲೆಡೆಯಿಂದ 250 ರಿಂದ 300 ಸಂಶೋಧನಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ವಿಭಾಗ ಮುಖ್ಯಸ್ಥ ಡಾ. ಗಣರಾಜ್, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಮಹೇಶ್ ಶೆಟ್ಟಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ,ವಿದ್ಯಾರ್ಥಿಗಳಾದ ಶ್ರೇಷ್ಠಾ ಹಾಗೂ ಅನಿಲ್ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version