ಬೆಳ್ತಂಗಡಿ:ಮಲವಂತಿಗೆ ಗ್ರಾಮದ ಎಳನೀರು ಪರಿಸರದ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿದ ಪರಿಣಾಮ 30 ಲಕ್ಷ ರೂ. ಗಿಂತ ಅಧಿಕ ನಷ್ಟ ಸಂಭವಿಸಿದೆ.
ಇಲ್ಲಿನ ಪ್ರಶಾಂತ್ ವೈ. ಆರ್. ಅವರ ಮನೆಯಲ್ಲಿ ಘಟನೆ ನಡೆದಿದ್ದು ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿದ್ದ ಸುಮಾರು 2 ಲಕ್ಷ ರೂ. ಮೊತ್ತದ ಅಡಕೆ, ಒಂದು ಲಕ್ಷ ರೂ. ಮೌಲ್ಯದ ಕಾಫಿ ಬೀಜ, 50ಸಾವಿರ ರೂ. ಮೊತ್ತದ ಕಾಳು ಮೆಣಸು,ಬಟ್ಟೆ ಬರೆ, ಪಾತ್ರೆ,ದಾಖಲೆ ಇತ್ಯಾದಿಗಳು ನಾಶವಾಗಿವೆ.
ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದು ಪ್ರಸ್ತುತ ಇವರಿಗೆ ನೆಲೆಸಲು ಮನೆ ಇಲ್ಲದಂತಾಗಿದೆ. ಸಹೋದರನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಈ ಬಗ್ಗೆ ತಹಸೀಲ್ದಾರ್, ವಿಎ, ಪಿಡಿಒ ಇವರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಮಲವಂತಿಗೆ ಗ್ರಾಪಂ ಅಧ್ಯಕ್ಷ ಪ್ರಕಾಶ್ ಜೈನ್, ಕಳಸ ಮೆಸ್ಕಾಂ ಉಪ ವಿಭಾಗದ ಎಇ ಕೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.