Home ಸ್ಥಳೀಯ ಸಮಾಚಾರ ತುಳುನಾಡಿನ ಸಂಪ್ರದಾಯಗಳನ್ನು ಮೀರಿ ನೇಮ ಕಟ್ಟುತ್ತಿರುವುದು ನೋವಿನ ವಿಚಾರ; ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ, ನಲಿಕೆ ಯವರ...

ತುಳುನಾಡಿನ ಸಂಪ್ರದಾಯಗಳನ್ನು ಮೀರಿ ನೇಮ ಕಟ್ಟುತ್ತಿರುವುದು ನೋವಿನ ವಿಚಾರ; ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ, ನಲಿಕೆ ಯವರ ಸಮಾಜ ಸೇವಾ ಸಂಘ

30
0

ಬೆಳ್ತಂಗಡಿ; ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ  ಮೂಡಾಯಿ ಪಲ್ಕೆ ಎಂಬಲ್ಲಿ ಉದ್ಬವ ಆದಿಲಿಂಗೇಶ್ವರ ಕ್ಷೇತ್ರದಲ್ಲಿ ತುಳುನಾಡಿನ ಸಂಪ್ರದಾಯ ಕಟ್ಟು ಕಟ್ಟಳೆ ಗಳನ್ನು ಮೀರಿ ನಲಿಕೆ ಸಮುದಾಯ ದವರಲ್ಲದವರು ಗುಳಿಗ ದೈವದ ನೇಮ‌ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ ಇದು ಸಮುದಾಯಕ್ಕೆ ಹಾಗೂ ದೈವ ಭಕ್ತರಿಗೆ ನೋವನ್ನು ಉಂಟುಮಾಡುತ್ತಿದೆ ಎಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ ಶಾಂತಿಕೋಡಿ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಚಾರಗಳನ್ನು ತಿಳಿಸಿದರು.
ಪುರಾತನ ಕಾಲದಿಂದಲೂ ನಲಿಕೆ ಸಮುದಾಯದವರು ಮಾತ್ರ ಮಾಡುತ್ತಾ ಬಂದಿರುವ ಗುಳಿಗ ದೈವದ ನೇಮ ಕಟ್ಟುವ ಕಾರ್ಯವನ್ನು ಮೊಗೇರ ಸಮುದಾಯದ ಒಂದು ಮನೆಯವರು ಇಲ್ಲಿ ಮಾಡುತ್ತಿದ್ದಾರೆ ಇದೀಗ ನಲಿಕೆ ಸಮಾಜದ ನರ್ತಕರು ಇಲ್ಲಿ ನಡೆಯುವ ನೇಮೋತ್ಸವದಲ್ಲಿ ದೈವದ ನೇಮವನ್ನು ಕಟ್ಟದಂತೆ ಹಾಗೂ ಭಾಗವಹಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದಾರೆ. ಆದ್ದರಿಂದ ತಾವು ಯಾರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ತಿಳಿಸಿದರು.
ಈ ಹಿಂದೆ ಇದೇ ಮನೆಯವರು ಸಂಪ್ರದಾಯಗಳನ್ನು ಮೀರಿ ನೇಮೋತ್ಸವವನ್ನು ಮಾಡಿದ್ದರು ಬಳಿಕ ಆದಿಲಿಂಗೇಶ್ವರ ದೈವಸ್ಥಾನದ ಅಧ್ಯಕ್ಷ ರುಕ್ಮಯ ಹಾಗೂ ಅವರ ಮಗ ಚಿತ್ತರಂಜನ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿ ಬಳಿಕ ಅವರು ನೇಮೋತ್ಸವವನ್ನು ಸ್ವ ಇಚ್ಚೆಯಿಂದ ನಿಲ್ಲಿಸುತ್ತೇವೆ ಎಂದು ಹೇಳಿದ್ದಲ್ಲದೆ ನಲಿಕೆಯವರ ಸಮುದಾಯ ಭವನನದ ಅಂಗಳದಲ್ಲಿ ಆರಾಧಿಸಿಕೊಂಡು ಬರುತ್ತಿರುವ ಗುಳಿಗ ದೈವದ ಸನ್ನಿಧಿಯಲ್ಲಿ ತಪ್ಪೊಪ್ಪಿಕೊಂಡು ತಪ್ಪು ಕಾಣಿಕೆ ಹಾಕಿರುತ್ತಾರೆ ಆದರೆ ಈ ವರ್ಷ ಮತ್ತೆ ಅದನ್ನೇ ಮಾಡಲು ಹೊರಟಿದ್ದಾರೆ ಅಲ್ಲದೆ ಧಾರ್ಮಿಕ ವಿಚಾರವನ್ನು ನ್ಯಾಯಾಲಯದ ಮುಂದೆ ಕೊಂಡೊಯ್ದಿದ್ದಾರೆ, ಇದು ನೋವಿನ ವಿಚಾರವಾಗಿದೆ ಆದ್ದರಿಂದ ನ್ಯಾಯಾಲಯದ ಆದೇಶದಂತೆ ನಲಿಕೆ ಸಮಾಜದ ದೈವ ನರ್ತಕರು ಹಾಗೂ ಸಮಾಜ ಬಾಂಧವರು ಸದ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ನಲಿಕೆ ದೈವಾರಾಧನೆಗೆ ಅದರದ್ದೆ ಆದ ಸಂಪ್ರದಾಯಗಳಿವೆ ಅದೆಲ್ಲವನ್ನೂ ಬಿಟ್ಟು ತಮಗೆ ಬೇಕಾದಂತೆ ಮಾಡುತ್ತೇವೆ ಎಂದು ಹೊರಟಿರುವುದು ಸರಿಯಾದ ಕ್ರಮವಲ್ಲ.
ತುಳುನಾಡಿನಲ್ಲಿ ನಲಿಕೆ, ಪರವ, ಪಂಬದ ಈ ಮೂರು ಸಮುದಾಯಗಳು ತಲತಲಾಂತರದಿಂದ ಭಕ್ತಿ, ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ನರ್ತನ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ ನ್ಯಾಯಾಲಯಕ್ಕೆ ಈ ಬಗ್ಗೆ ಸಮರ್ಪಕವಾದ ಮಾಹಿತಿ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಒದಗಿಸುವ ಕಾರ್ಯ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ದೈವಾರಾಧನಾ ಸಮಿತಿಯ ಅಧ್ಯಕ್ಷ ಜನಾರ್ಧನ ಬುಡೋಳಿ, ಸಂಘದ ಉಪಾಧ್ಯಕ್ಷ ರಾಮು ಶಿಶಿಲ, ಸಮಿತಿ ಸದಸ್ಯ ವಿನಯ ಕುಮಾರ್, ಕೊರಗಪ್ಪ ಕಲ್ಲಡ್ಕ ಇದ್ದರು.

LEAVE A REPLY

Please enter your comment!
Please enter your name here