ಬೆಳ್ತಂಗಡಿ; ಆಶಾ ಕಾರ್ಯಕರ್ತೆಯರು ಇಂದು ಜನರ ಆರೋಗ್ಯ ರಕ್ಷಣೆಗಾಗಿ ಕಷ್ಟ ಪಡುತ್ತಿದ್ದರೂ ಅವರಿಗೆ ಕನಿಷ್ಟ ವೇತನ ಜಾರಿ ಮಾಡದಿರುವುದು ವಿಷಾಧನೀಯ ಎಂದು ಸಿಐಟಿಯು ಮುಖಂಡರಾದ ಬಿ.ಎಂ.ಭಟ್ ಹೇಳಿದರು.
ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆ ಯರ ಸಮಾವೇಶವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಸರಕಾರ ಆಶಾ ಕಾರ್ಯಕರ್ತೆಯರಿಗೆ ಕೆಲಸದ ಭದ್ರತೆ ನೀಡಿ ರಕ್ಷಣೆ ಮಾಡಬೇಕಾಗಿದೆ ಎಂದರು. ಸಿಐಟಿಯು ನೇತೃತ್ವದಲ್ಲಿ ಬಲಿಷ್ಟ ಸಂಘಟೆನೆ ಕಟ್ಟಿ ಬೆಳೆಸಬೇಕು ಮತ್ತು ಸಿಐಟಿಯುನ ರಾಜಿ ಇಲ್ಲದ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು ಎಂದರು. ಸಿಐಟಿಯುನಿಂದ ಮಾತ್ರವೇ ದುಡಿಯುವ ವರ್ಗದ ಹಿತ ಕಾಪಾಡಲು ಸಾದ್ಯ ಎಂಬುದು ದೇಶದ ಇತಿಹಾಸವೇ ಆಗಿದೆ ಎಂದರು.
ಜಿಲ್ಲಾದ್ಯಕ್ಷರಾದ ದೇವಕಿ ಅವರೂ ಮಾತಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ರೂಪ ವೇದಿಕೆಯಲ್ಲಿದ್ದರು. ಮೊದಲಿಗೆ ರೇಖಾ ಸ್ವಾಗತಿಸಿ ಕೊನೆಗೆ ಭವಾನಿ ವಂದಿಸಿದರು. ಸಮಾವೇಶದ ಬಳಿಕ ಸಂಘದ ಪದಾದಿಕಾರಿಗಳ ನಿಯೋಗವು ತೆರಳಿ ಟಿ.ಎಚ್.ಓ ಮೂಲಕ ಮಾನ್ಯ ಆರೋಗ್ಯ ಸಚಿವರಿಗೂ, ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಯಿತು. ಸಮಾವೇಶದಲ್ಲಿ ಸಿಐಟಿಯುನ ರಾಮಚಂದ್ರ, ಡಿ.ವೈ.ಎಫ್.ಐನ ಅಭಿಷೇಕ್ ಇದ್ದರು.
