ಬೆಳ್ತಂಗಡಿ; ಕೊಕ್ಕಡದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿ ಇರಿಸಿದ್ದ ರೂ ಎರಡು ಲಕ್ಷ ನಗದನ್ನು ಅಪಹರಿಸಿದ ಘಟನೆ ನಡೆದಿದ್ದುವೀ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಕ್ಕಡ ಪೇಟೆಯಲ್ಲಿ ಅಡಿಕೆ, ಬಾಳೆಕಾಯಿ, ಹಾಗೂ ಇತರೆ ವ್ಯಾಪಾರ ನಡೆಸುತ್ತಿರುವ ಕೌಕ್ರಾಡಿ ಗ್ರಾಮದ ನಿವಾಸಿ ಇಸುಬು ಎಂಬವರೇ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ.
ನ15ರಂದು ಘಟನೆ ನಡೆದಿದ್ದು ಇಸುಬು ಅವರು ಮದ್ಯಾಹ್ನ ಮಸೀದಿಗೆ ಹೋಗಲು ಅಂಗಡಿಗೆ ಬಾಗಿಲು ಹಾಕುತ್ತಿದ್ದ ವೇಳೆ ಬಂದ ಅಪರಿಚಿತ ವ್ಯಕ್ತ ಬಾಳೆಕಾಯಿ ಕೇಳಿದ್ದು ಅದನ್ನು ತೆಗೆಯುತ್ತಿದ್ದ ವೇಳೆ ಉಪಾಯವಾಗಿ ಆತ ನಗದು ಇದ್ದ ಬ್ಯಾಗನ್ನು ಅಪಹರಿಸಿದ್ದು ವಾಹನ ತರುವುದಾಗಿ ಹೇಳಿ ಹೋಗಿದ್ದಾರೆ ಬಳಿಕ ಅಂಗಡಿಯಲ್ಲಿ ಪರಿಶೀಲಿಸಿದಾಗ ಎರಡು ಲಕ್ಷ ನಗದು ಇದ್ದ ಬ್ಯಾಗ್ ನಾಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿ ಬ್ಯಾಗ್ ಹಾಗೂ ನಗದನ್ನು ಅಪಹರಿಸಿರುವ ಅನುಮಾನವಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.