Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಧರ್ಮ ಪ್ರಾಂತ್ಯದ ವತಿಯಿಂದ ಮಾದಕ ವಸ್ತುಗಳ ವಿರುದ್ದ ಬ್ರಹತ್ ಜನಜಾಗೃತಿ ಅಭಿಯಾನ ಹಾಗೂ ಮ್ಯಾರಥಾನ್...

ಬೆಳ್ತಂಗಡಿ ಧರ್ಮ ಪ್ರಾಂತ್ಯದ ವತಿಯಿಂದ ಮಾದಕ ವಸ್ತುಗಳ ವಿರುದ್ದ ಬ್ರಹತ್ ಜನಜಾಗೃತಿ ಅಭಿಯಾನ ಹಾಗೂ ಮ್ಯಾರಥಾನ್ ಓಟ

0

ಮುಂಡಾಜೆ: ಬೆಳ್ತಂಗಡಿ ಧರ್ಮಪ್ರಾಂತ್ಯದ ಸಿರೋಮಲಬಾರ್ ಯೂತ್ ಮೂವ್ಮೆಂಟ್ ಇದರ ನೇತ್ರತ್ವದಲ್ಲಿ ಡಿ. ಕೆ. ಆರ್. ಡಿ. ಎಸ್.(ರಿ) ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜನಜಾಗೃತಿ ಮೂಡಿಸುವ ಅಂಗವಾಗಿ ಮಾಹಿತಿ ಕಾರ್ಯಕ್ರಮ, ಮ್ಯಾರಥಾನ್ ಒಟ, ಜನಜಾಗೃತಿ ರಾಲಿ ಹಾಗೂ ಬೀದಿ ನಾಟಕ ಮುಂತಾದ ಕಾರ್ಯಕ್ರಮಗಳನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಜುನಾಥ ಆರ್. ಜಿ., ಕೆ ಎಸ್ ಪಿ ಎಸ್, ಡಿ ವೈ ಎಸ್ ಪಿ, ಸೆನ್ ಪಿ ಎಸ್ ದಕ್ಷಿಣ ಕನ್ನಡ ಅವರು ಮಾತನಾಡಿ
“ಮಾದಕ ವಸ್ತಗಳ ದುಷ್ಪರಿಣಾಮದ ಕುರಿತು ಅರಿವನ್ನು ಪಡೆದು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಮಾಡುವಲ್ಲಿ ಒಟ್ಟಾಗಿ ನಾವೆಲ್ಲರೂ ಹೋರಾಟ ಮಾಡಬೇಕು” ಎಂದು ಹೇಳಿದರು.

ಮಾದಕ ವಸ್ತಗಳ ಉಪಯೋಗದ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಸಲುವಾಗಿ ಬೆಳಿಗ್ಗೆ 9.30 ಕ್ಕೆ ಸರಿಯಾಗಿ ತೋಟತ್ತಾಡಿಯಿಂದ ಮುಂಡಾಜೆಯವರೆಗೆ ಹಮ್ಮಿಕೊಂಡ ಮ್ಯಾರಥಾನ್ ಸ್ಪರ್ಧೆಯನ್ನು ತೋಟತಾಡಿ ಚರ್ಚ್ ನ ವಠಾರದಲ್ಲಿ ವಂದನೀಯ ಫಾದರ್ ಜೋಸ್ ಪೂವತ್ತಿಂಗಲ್, ರಿಬ್ಬನ್ ಕತ್ತರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು.

ಮುಂಡಾಜೆ ಧರ್ಮ ಕ್ಷೇತ್ರದ ಸರ್ವ ಸದಸ್ಯರು ರಾಲಿಯ ಮೂಲಕ ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಎಸ್ ಎಂ ವೈ ಎಂ ಸದಸ್ಯರು ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜನಜಾಗೃತಿಯನ್ನು ಬೀದಿನಟಕದ ಮೂಲಕ ಮೂಡಿಸಿದರು. ಈ ಸಂದರ್ಭದಲ್ಲಿ
ರಾಷ್ಟ್ರಮಟ್ಟದ ಕ್ರೀಡಾಪ್ರತಿಬೆ ಮುಂಡಾಜೆ ನಿವಾಸಿಯಾದ ತೇಜಲ್ ಕೆ.ಆರ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.


ಮ್ಯಾರಥಾನ್ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನವನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವನ್ನು ನೀಡಲಾಯಿತು. ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜನಜಾಗೃತಿಯನ್ನು ಮೂಡಿಸಿದ ಅತ್ಯುತ್ತಮ 10 ಪ್ರದರ್ಶನ ಫಲಕಗಳನ್ನು ಗುರುತಿಸಿ ಬಹುಮಾನವನ್ನು ನೀಡಲಾಯಿತು.

ವೇದಿಕೆಯಲ್ಲಿ ಧರ್ಮಸ್ಥಳದ ಸಬ್ ಇನ್ಸ್ಪೆಕ್ಟರ್ ಕಿಶೋರ್ ಪಿ, ಧರ್ಮಪ್ರಾಂತ್ಯದ ಸಿರೋಮಲಬಾರ್ ಯೂತ್ ಮೂವ್ಮೆಂಟ್ ಇದರ ನಿರ್ದೇಶಕರಾದ ವಂ. ಫಾ .ಜೋಬಿ ಪುಲ್ಲಾಟ್, ಡಿ ಕೆ ಆರ್ ಡಿ ಎಸ್ (ರಿ) ಬೆಳ್ತಂಗಡಿ ಇದರ ನಿರ್ದೇಶಕರಾದ ವಂ. ಫಾ .ಬಿನೋಯಿ ಎಜೆ, ಧರ್ಮೋಪದೇಶ ಕೇಂದ್ರ, ಬೆಳ್ತಂಗಡಿ ಇದರ ನಿರ್ದೇಶಕರಾದ ವಂ. ಫಾ. ಜೋಸೆಫ್ ಮಟ್ಟಂ, ಸೇಂಟ್ ಮೇರಿಸ್ ಚರ್ಚ್ ಮುಂಡಾಜೆ ಇದರ ಧರ್ಮ ಗುರುಗಳಾದ ವಂ. ಫಾ. ಶಿಬಿ ಪುದಿಯರ, ಸೈಂಟ್ ಜಾರ್ಜ್ ಚರ್ಜ್ ಉಜಿರೆ ಇದರ ಧರ್ಮಗುರುಗಳಾದ ವಂ. ಫಾ ಮ್ಯಾಥ್ಯೂ ಅಂಬಾಟ್ ಮುಂತಾದವರು ಉಪಸ್ಥಿತರಿದ್ದು ಬಹುಮನ ವಿತರಣೆಗೆ ಸಹಕರಿಸಿದರು.

ಎಸ್. ಎಂ .ವೈ. ಎಂ ಬೆಳ್ತಂಗಡಿ ದರ್ಮ ಪ್ರಾಂತ್ಯ ಇದರ ಅಧ್ಯಕ್ಷರಾದ ಸಿರಿನ್ ಥಾಮಸ್ ಇವರು ಸ್ವಾಗತಿಸಿದರು, ಎಸ್ .ಎಂ .ವೈ .ಎಂ ಬೆಳ್ತಂಗಡಿ ದರ್ಮ ಪ್ರಾಂತ್ಯ ಐದರ ಕಾರ್ಯದರ್ಶಿಯಾದ
ಡಿಕ್ಸನ್ ವಂದಿಸಿದರು. ಪ್ರಾರ್ಥನಾ ಗೀತೆಯನ್ನು ಮಿಷನ್ ಲೀಗ್ ಸಂಘಟನೆ,ಮುಂಡಾಜೆ ಇದರ ವಿದ್ಯಾರ್ಥಿಗಳು ನೆರವೇರಿಸಿದರು. ಕಾರ್ಯಕ್ರಮವನ್ನು ಎಸ್. ಎಂ .ವೈ .ಎಂ ಇದರ ಉಪ ಕಾರ್ಯದರ್ಶಿ ಕುಮಾರಿ ಪ್ರಜೀಶ ನಿರೂಪಿಸಿದರು.
ಮ್ಯಾರಥಾನ್ ಓಟದ ಮೈಕ್ ಘೋಷಣೆಯನ್ನು ಸೈಂಟ್ ತೋಮಸ್ ಶಾಲೆ ಗಂಡಿಬಾಗಿಲು ಇದರ ಪ್ರಾಧ್ಯಾಪಕರಾದ ಬೇಬಿ ಕಲ್ಲಿಕಾಟ್ ಐವರು ನೆರವೇರಿಸಿದರು. ಮ್ಯಾರಥಾನ್ ಓಟದಲ್ಲಿ ಒಟ್ಟು 85 ಮಂದಿ ಬಾಗವಹಿಸಿದರು. ಒಟ್ಟು 600 ಮಂದಿ ಸದಸ್ಯರು ಕಾರ್ಯ ಕ್ರಮದಲ್ಲಿ ಪಾಲ್ಗೊಂಡರು.

NO COMMENTS

LEAVE A REPLY

Please enter your comment!
Please enter your name here

Exit mobile version