Home ಸ್ಥಳೀಯ ಸಮಾಚಾರ ಬೆಳ್ತಂಗಡಿ ವಕೀಲರ ಸಂಘಕ್ಕೆ ನ್ಯಾಯಮೂರ್ತಿ ರಾಜೇಶ್‌ ರೈ ಭೇಟಿ

ಬೆಳ್ತಂಗಡಿ ವಕೀಲರ ಸಂಘಕ್ಕೆ ನ್ಯಾಯಮೂರ್ತಿ ರಾಜೇಶ್‌ ರೈ ಭೇಟಿ

0

ಬೆಳ್ತಂಗಡಿ; ವಕೀಲರು ವೃತ್ತಿಯಲ್ಲಿ ಪ್ರಕರಣಗಳ ಬಗ್ಗೆ ಸತತ ಪರಿಶ್ರಮ ಮತ್ತು ಅದ್ಯಯನ ನಡೆಸಿ ಕೆಲಸ ನಿರ್ವಹಿಸಿದಲ್ಲಿ ಕಕ್ಷಿಗಾರರಿಗೆ ನ್ಯಾಯ ದೊರಕುವ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾದ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ರಾಜೇಶ್‌ರೈ, ಕೈರಂಗಳ ಅಭಿಪ್ರಾಯಪಟ್ಟಿದ್ದಾರೆ.

ಅವರು ನ. 16 ರಂದು ಬೆಳ್ತಂಗಡಿ ವಕೀಲರ ಸಂಘಕ್ಕೆ ಭೇಟಿ ನೀಡಿ ವಕೀಲರನ್ನುದ್ದೇಶಿ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ವಕೀಲರುಗಳು ಅದ್ಯಯನಶೀಲತೆಯ ಮೂಲಕ ಪಾಂಡಿತ್ಯ ಹೊಂದಿದ್ದು ನ್ಯಾಯಂಗದಲ್ಲಿ ತಮ್ಮದೇ ಆದ ಗೌರವವನ್ನು ಹೊಂದಿದ್ದಾರೆ ಎಂದವರು ಈ ಸಂಧರ್ಭದಲ್ಲಿ ಹೇಳಿದರು.

ಯುವ ವಕೀಲರು ನ್ಯಾಯಲಯದ ಕಲಾಪಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಹಿರಿಯ ನ್ಯಾಯವಾದಿಗಳು ಪ್ರಕರಣ ನಡೆಸುವ ಸಂಧರ್ಭವನ್ನು ಆಲಿಸುವ ಮೂಲಕ ಸಮಯದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ಯುವ ವಕೀಲರಿಗೆ ಕರೆ ನೀಡಿದರು.

ಇದೇ ಸಂಧರ್ಭದಲ್ಲಿ 6೦ ವರ್ಷ ಹಳೆಯದಾದ ಬೆಳ್ತಂಗಡಿ ನ್ಯಾಯಾಲಯದ ಸಂಕೀರ್ಣವನ್ನು ವೀಕ್ಷಿಸಿ ಹೊಸ ಕಟ್ಟಡ ಮಂಜೂರಾತಿಗಾಗಿ ಸರಕಾರದ ಮಟ್ಟದ್ಲಲ್ಲಿ ಒತ್ತಡ ತರಲು ವಕೀಲರ ಸಂಘದ ಜೊತೆ ಕೈ ಜೋಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಕಿಲರ ಸಂಘದ ಅದ್ಯಕ್ಷರಾದ ವಸಂತ ಮರಕಡ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ ಸ್ವಾಗತಿಸಿ, ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್, ಎ ಕಾರ್ಯಕ್ರಮ ನಿರೂಪಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version