Home ಸ್ಥಳೀಯ ಸಮಾಚಾರ ಮುಳಿಯ ಜುವೆಲ್ಲರ್ಸ್‌, ಬೆಳ್ತಂಗಡಿ ಇವರಿಂದ ದಯಾ ವಿಶೇಷ ಶಾಲೆಗೆ ಅಭಿನಂದನಾ ಕಾರ್ಯಕ್ರಮ

ಮುಳಿಯ ಜುವೆಲ್ಲರ್ಸ್‌, ಬೆಳ್ತಂಗಡಿ ಇವರಿಂದ ದಯಾ ವಿಶೇಷ ಶಾಲೆಗೆ ಅಭಿನಂದನಾ ಕಾರ್ಯಕ್ರಮ

51
0


ಬೆಳ್ತಂಗಡಿ; ದಯಾ ವಿಶೇಷ ಶಾಲೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಬೆಳ್ತಂಗಡಿಯ ಮುಳಿಯ ಜುವೆಲ್ಲರ್ಸ್‌ ರವರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ದಯಾ ವಿಶೇಷ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಮುಳಿಯ ಜುವೆಲ್ಲರ್ಸ್‌ ವತಿಯಿಂದ ಸಿಬ್ಬಂದಿಗಳು ಆಗಮಿಸಿ ಶಾಲೆಯ ನಿರ್ದೇಶಕರಾದ ವಂ.ಫಾ.ವಿನೋದ್‌ ಮಸ್ಕರೇನಸ್‌ ರವರನ್ನು ಸನ್ಮಾನಿಸಿ, ಸಮಾಜದಲ್ಲಿ ಕಡೆಗಣಿಸಲ್ಪಟ್ಟ ವಿಕಲಚೇತನ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅವರ ಸರ್ವತೋಮುಖ ಏಳಿಗೆಗಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಶಾಲೆಯನ್ನು ಪ್ರಶಂಸಿದರು. ವಂ.ಫಾ.ವಿನೋದ್‌ ಮಸ್ಕರೇನಸ್‌ ರವರು ಮಾತನಾಡಿ ಮುಳಿಯ ಜುವೆಲ್ಲರ್ಸ್‌ ರವರು ನಮ್ಮ ಶಾಲಾ ವಾರ್ಷಿಕೋತ್ಸವದ ವೇಳೆ ಹಲವು ಬಾರಿ ಮಕ್ಕಳಿಗೆ ಹಾಗೂ ಶಾಲೆಗೆ ತಮ್ಮಿಂದಾದ ಸಹಾಯವನ್ನು ನೀಡಿ ನಮ್ಮ ಈ ಕಾರ್ಯದಲ್ಲಿ ಸಹಕಾರ ಹಾಗೂ ನಮಗೆ ಪ್ರಚೋದನೆ ನೀಡಿರುತ್ತಾರೆ. ಭಗವಂತನು ಅವರ ಎಲ್ಲಾ ಕಾರ್ಯಗಳಲ್ಲಿ ಅವರನ್ನು ಸದಾ ಹರಸಲಿ ಜುವೆಲ್ಲರ್ಸ್‌ನ ಮಾಲಕರಿಗೂ, ಕುಟುಂಬಸ್ಥರಿಗೂ ಹಾಗೂ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ ಭಗವಂತನು ಆಯುರಾರೋಗ್ಯವನ್ನು ನೀಡಲಿ ಹಾಗೂ ಮಾಡುವ ಕೆಲಸಗಳಲ್ಲಿ ಅವರು ಉತ್ತಮ ಫಲ ಕಾಣುವಂತಾಗಲಿ ಎಂದು ಆಶಿಸಿದರು. ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿರುವ ಇಂತಹ ಸಂಸ್ಥೆಗಳು ನಮ್ಮೊಂದಿಗೆ ಇರುವುದರಿಂದ ನಮಗೆ ಇನ್ನೂ ಮುಂದುವರೆಯಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here