Home ರಾಜಕೀಯ ಸಮಾಚಾರ ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿ ವಿರುದ್ದ ಸಿ.ಪಿ.ಎಂ ನೇತೃತ್ವದಲ್ಲಿ ಪ್ರತಿಭಟನೆ

ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿ ವಿರುದ್ದ ಸಿ.ಪಿ.ಎಂ ನೇತೃತ್ವದಲ್ಲಿ ಪ್ರತಿಭಟನೆ

24
0

ಬೆಳ್ತಂಗಡಿ; ರೈತರ ಹಿತ ಕಾಪಾಡುವುದೇ ಜನಪರ ಸರಕಾರಗಳ ಆದ್ಯತೆಯಾಗಬೇಕು ರೈತರು ದೇಶದ ಬೆನ್ನೆಲುಬು, ರೈತರ ಹಿತ ಕಾಪಾಡಲು ಅಸಮರ್ಥರಾದ ಸರಕಾರ ದೇಶವನ್ನು ಆಳಲು ಅಯೋಗ್ಯವಾಗಿದೆ ಎಂದು ಹಿರಿಯ ರೈತ ಮುಖಂಡರಾದ ಕರ್ನಾಟಕ ಪ್ರಾಂತ ರೈತ ಸಂಘ ಬೆಳ್ತಂಗಡಿ ತಾಲೂಕು ಅದ್ಯಕ್ಷರಾದ ಪಾಂಗಳ ಲಕ್ಷ್ಮಣ ಗೌಡ ಹೇಳಿದರು.
ಅವರು ಮಂಗಳವಾರ ಕರ್ನಾಟಕಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಬೇಕು, ಕಸ್ತೂರಿ ರಂಗನ್ ವರದಿ ಜಾರಿಗೆ ತರಬಾರದು, ರೈತರ ಭೂಮಿ ಉಚಿತ ಪ್ಲಾಟಿಂಗ್ ಮಾಡಬೇಕು, ಅಡಿಕೆ ಆಮದು ನಿಷೇದಿಸಬೇಕು, ರೈತರಿಗೆ ಮನೆ ಕಟ್ಟಲು ಕನ್ವರ್ಶನ್ ಕಡ್ಡಾಯ ಇರಬಾರದು, ತಕ್ಷಣ ಅಕ್ರಮ ಸಕ್ರಮ ಹಕ್ಕುಪತ್ರ ನೀಡಲು ಆಗ್ರಹಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು. ರೈತರ ಸಮಸ್ಯೆಗಳ ಬಗ್ಗೆ ಗಮನ ನೀಡಿ ನಮಗೆ ನ್ಯಾಯ ಒದಗಿಸದೇ ಇದ್ದರೆ ಮುಂದೆ ಅನಿರ್ಧಿಷ್ಟಕಾಲ ಹೋರಾಟ ನಡೆಸುತ್ತೇವೆ ಎಂದರು.


ಈ ಸಂದರ್ಭ ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಅವರು ಮಾತಾಡುತ್ತಾ ಕ್ಷೇತ್ರದ ಶಾಸಕರು ತಾನು ಕಸ್ತೂರಿ ರಂಗನ್ ವಿರೋದಿ ಎಂದು ಇಲ್ಲಿ ಹೇಳುತ್ತಿರುವಾಗಲೇ ಶಾಸಕರೂ, ಸಂಸದರೂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಕಸ್ತೂರಿ ರಂಗನ್ ಜಾರಿ ಮಾಡಲು ತುದಿಕಾಲಲ್ಲಿ ನಿಂತಿರುವ ಹಾಗೂ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ಅಗತ್ಯವಿರುವ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡಲು ಸಿದ್ದರಿಲ್ಲದ ಮಾನ್ಯ ನರೇಂದ್ರ ಮೋದಿಯವರ ಎದುರು ಬಾಯಿ ಬಿಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರ. ಹರೀಶ್ ಪೂಂಜರು ಕಸ್ತೂರಿ ರಂಗನ್ ವರದಿ ಜಾರಿಗೆ ತಾನೂ, ತನ್ನ ಪಕ್ಷವೂ ವಿರೋದ ಎನ್ನತ್ತಿರುವಾಗಲೇ ಅವರದೇ ಪಕ್ಷ ಅದನ್ನು ಜಾರಿ ಮಾಡಲು ಹೊರಟಿರುವುದು ಯಾಕೆ ಎಂದರು ? ರೈತರ ಭೂಮಿಯ ಉಚಿತ ಪ್ಲಾಟಿಂಗ್ ಮಾಡಿಸುವುದು, ಅಕ್ರಮ ಸಕ್ರಮ ವಿಲೆವಾರಿ ಮಾಡಿ ಹಕ್ಕುಪತ್ರ ನೀಡುವುದು, ಕೇಂದ್ರ ಸರಕಾರ ಅಡಿಕೆ ಆಮದಿಗೆ ಅವಕಾಶ ನೀಡಿರುವುದನ್ನು ವಿರೋದಿಸುವುದು ನಿಜವಾಗಿ ರೈತರ ಪರವಾಗಿ ಇರುವವರ ಆದ್ಯ ಕರ್ತವ್ಯವಾಗಿದೆ ಎಂದರು.
ಸಲಿಮೋನ್ ಸ್ವಾಗತಿಸಿದರು. ಬಳಿಕ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು. ಹೋರಾಟದಲ್ಲಿ ರೈತ ಮುಖಂಡರುಗಳಾದ ಅಜಿ ಎಂ ಜೋಸ್, ಜಯರಾಮ ಮಯ್ಯ, ಡಾಗಯ್ಯ, ಪ್ರದೀಪ ಕಾರ್ಮಿಕ ಮುಖಂಡರುಗಳಾದ ಲೋಕೇಶ್, ಜಯಶ್ರೀ, ರಾಮಚಂದ್ರ, ಲೋಕೇಯ ಪೂಜಾರಿ, ಯುವನಾಯಕರಾದ ಅಭಿಷೇಕ್, ಅಶ್ವಿತ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here