Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಇದರ ಅಧ್ಯಕ್ಷ ದೀಪಕ್ ಜಿ. ಇವರಿಗೆ ಸಮಾಜ ರತ್ನ...

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಇದರ ಅಧ್ಯಕ್ಷ ದೀಪಕ್ ಜಿ. ಇವರಿಗೆ ಸಮಾಜ ರತ್ನ ಪ್ರಶಸ್ತಿ

0

ಬೆಳ್ತಂಗಡಿ: ನ.24ರಂದು ತುಮಕೂರು ಕನ್ನಡ ಸಭಾ ಭವನದಲ್ಲಿ ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು, ಶ್ರೀ ಸಾಯಿರಾಮನ್ ನೃತ್ಯ ಕೇಂದ್ರ ತುಮಕೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ಇದರ ಸಹಕಾರದಲ್ಲಿ
ಕನ್ನಡ ರಾಜ್ಯೋತ್ಸವ – 2024
ವಿವಿಧ ಕ್ಷೇತ್ರದ ಗಣ್ಯರಿಗೆ ಮತ್ತು ಜಿಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು ಬೆಳ್ತಂಗಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಇದರ ಅಧ್ಯಕ್ಷರಾದ ದೀಪಕ್ ಜಿ. ಇವರಿಗೆ ಸಮಾಜ ರತ್ನ ಪ್ರಶಸ್ತಿ ಲಭಿಸಲಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಟು ಮಂದಿ ಸಾಧಕರಿಗೆ ಸಮಾಜ ರತ್ನ ಪ್ರಶಸ್ತಿ ಲಭಿಸಲಿದ್ದು, ದೀಪಕ್ ಜಿ. ಇವರಿಗೆ ಸಮಾಜ ಸೇವೆಯಲ್ಲಿ ಈ ಪ್ರಶಸ್ತಿ ಲಭಿಸಲಿದೆ. ದೀಪಕ್ ಜಿ ಯವರು ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆ ಯಲ್ಲಿ ತೊಡಗಿದ್ದು ಸುಮಾರು 42 ಬಡಕುಟುಂಬಗಳಿಗೆ ಮನೆ ನಿರ್ಮಾಣ, ರೋಗಿಗಳಿಗೆ ನೆರವು ಉಚಿತ ವೈದ್ಯಕೀಯ ಶಿಬಿರ, ಸರಕಾರಿ ಆಸ್ಪತ್ರೆಗಳ ಸ್ವಚ್ಚತೆ,ಸರಕಾರಿ ಶಾಲೆಗಳ ಶೌಚಾಲಯ ಸ್ವಚ್ಚತಾ ಆಂದೋಲನ, ದುರಸ್ತಿ, ವಿಷೇಶ ಚೇತನರಿಗೆ ವೀಲ್ ಚಯರ್ ನೆರವು, ಕರೋನಾ ಸಂದರ್ಭದಲ್ಲಿ ಕರೋನಾ ವಾರಿಯರ್ಸ್ ಆಗಿ ಸೇವೆ, ವೃದ್ದಾಶ್ರಮಗಳಿಗೆ ನೆರವು, ಕ್ರೀಡಾಕೂಟಗಳ ಅಯೋಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಯೋಜನೆ ಇನ್ನಿತರ ಹತ್ತು ಹಲವು ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version