ಬೆಳ್ತಂಗಡಿ; ಆನ್ ಲೈನ್ ಕೆಲಸ ಕೊಡಿಸುವುದಾಗಿ ನಂಬಿಸಿ ಕಾಯರ್ತಡ್ಕ ನಿವಾಸಿ ಮಹಿಳಿಯೊಬ್ಬರಿಂದ 4.25ಲಕ್ಷ ಹಣ ಪಡೆದು ವಂಚಿಸಿದ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಯರ್ತಡ್ಕ ನಿವಾಸಿ ಮಹಿಳೆಯೊಬ್ಬರಿಗೆ ಅ 9 ರಂದು ಅಪರಿಚಿತ ವ್ಯಕ್ರಿಯೊಬ್ಬ ಕರೆ ಮಾಡಿ ಆನ್ಲೈನ್ ಕೆಲಸದ ಆಪರ್ ನೀಡಿದ್ದು ಅದರಂತೆ ಮಹಿಖೆ ಕೆಲಸ ಆರಂಭಿಸಿದ್ದು ಆ ಬಳಿಕ ಆರೋಪಿಗಳು ವಿವಿಧ ಕಾರಣಗಳನ್ನು ತಿಳಿಸಿ ಅವರಿಂದ ಬೇರೆ ಬೇರೆ ಖಾತೆಗಳಿಗೆ ಆನ್ ಲೈನ್ ಮೂಲಕ 4,25,934 ರೂ ಹಣವನ್ನು ವರ್ಗಾಯಿಸಿಕೊಂಡು ಬಳಿಕ ಕರೆ ಸ್ವೀಕರಿಸದೆ ವಂಚಿಸಿದ್ದು ಈ ಬಗ್ಗೆ ವಂಚನೆಗೆ ಒಳಗಾದ ಮಹಿಳೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.