Home ಸ್ಥಳೀಯ ಸಮಾಚಾರ ಪ್ರಾಮಾಣಿಕತೆ, ಪೂರ್ವ ಸಿದ್ಧತೆಯೊಂದಿಗೆ ಅವಕಾಶಗಳನ್ನು ಬಳಸಿ; ಅಲೆಕ್ಸ್‌ ಸಿಕ್ವೆರಾ

ಪ್ರಾಮಾಣಿಕತೆ, ಪೂರ್ವ ಸಿದ್ಧತೆಯೊಂದಿಗೆ ಅವಕಾಶಗಳನ್ನು ಬಳಸಿ; ಅಲೆಕ್ಸ್‌ ಸಿಕ್ವೆರಾ

0


ಬೆಳ್ತಂಗಡಿ; ಶಿಬಿರ ಮತ್ತು ತರಬೇತಿಗಳು ಸಾಕಷ್ಟು ನಡೆಯುತ್ತದೆ. ಆದರೆ ಅದರ ಕೊನೆಯಲ್ಲಿ ತರಬೇತಿಯ ಮೌಲ್ಯ ಮಾಪನ ಮಾಡಿದರೆ ಅದರ ಪರಿಣಾಮವನ್ನು ತಿಳಿಸುತ್ತದೆ. ರುಡ್‌ ಸೆಟ್‌ ಸಂಸ್ಥೆಯಲ್ಲಿ ನಡೆಯುವ. ನಿಮ್ಮ ತರಬೇತಿಯ ಶಿಬಿರಾರ್ಥಿಗಳ ಅನುಭವ ಕೇಳಿದರೆ ಇಲ್ಲಿಯ ತರಬೇತಿಯ ಗುಣಮಟ್ಟ ಎಷ್ಟು ವೈಶಿಷ್ಠಪೂರ್ಣ ಎಂಬುದು ತಿಳಿಯುತ್ತದೆ ಎಂದು
ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ಪ್ರಾಶುಂಪಾಲರಾದ ಪ್ರೋ. ಅಲೆಕ್ಸ್‌ ಸಿಕ್ವೆರಾ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 45 ದಿನಗಳ ಕಾಲ ನಡೆದೆ * ಕಂಪ್ಯೂಟರ್‌ ಡಿಸೈನ್‌- ಡಿಟಿಪಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು.
ಈಗಿನ ಕಂಪ್ಯೂಟರ್‌ ಯುಗದಲ್ಲಿ ಡಿಜಿಟಲ್‌ ವ್ಯವಹಾರ ನಡೆಸುವ ಕಾಲದಲ್ಲಿ ಕಂಪ್ಯೂಟರ್‌ ಜ್ಞಾನ ಪಡೆಯುವಂತಹದ್ದು ಅತೀ ಅವಶ್ಯಕ. ಕಂಪ್ಯೂಟರ್‌ನ ಮೂಖಾಂತರ ಬೇರೆ ಬೇರೆ ವೃತ್ತಿಗಳನ್ನು ಮಾಡಲು ಅವಕಾಶ ಇದೆ. ಅದನ್ನು ಬಳಸಿಕೊಳ್ಳಬೇಕು.ಇಲ್ಲಿ ಕೇವಲ ಕಂಪ್ಯೂಟರ್‌ ಕೌಶಲ್ಯ ಮಾತ್ರವಲ್ಲ ಇಲ್ಲಿ ಜೀವನ ಕೌಶಲ್ಯವನ್ನು ಕಲಿಸುತ್ತೀರುವುದು ಅತ್ಯಂತ ಪ್ರಮುಖ ವಿಷಯವಾಗಿದೆ.ನಮಗೆ ಸಮಾಜದಲ್ಲಿ ವ್ಯವಹಾರಿಸುವಾಗ ಗುರು-ಹಿರಿಯರನ್ನು ಗೌರವಿಸುದರೊಂದಿಗೆ ನಡೆಸುವುದು ಒಳ್ಳೆಯದು. ಪ್ರಾಮಾಣಿಕವಾದ ಪ್ರಯತ್ನ ಮಾಡಿ, ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಅವಕಾಶಗಳನ್ನು ಬಳಸಿಕೊಂಡು ಆತ್ಮವಿಶ್ವಾಸದಿಂದ ಮುಂದುವರೆದು ಯಶಸ್ಸುಗಳಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ವಹಿಸಿ, ಮಾತನಾಡಿ ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಅವರು ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದರು ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 31 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು, ದೀಪ್ತಿ ಮತ್ತು ಸೌಮ್ಯ ಪ್ರಾರ್ಥನೆ ಮಾಡಿದರು, ಕು.ಪ್ರತೀಕ್ಷಾ, ಸಂದೀಪ್‌, ತೇಜ್‌ರಾಜ್‌ ತರಬೇತಿಯ ಅನುಭವ ಹಂಚಿಕೊಂಡರು.

NO COMMENTS

LEAVE A REPLY

Please enter your comment!
Please enter your name here

Exit mobile version